ಒಂಟಿ ಮಹಿಳೆಯರನ್ನು ಬೆದರಿಸಿ, ಒಡವೆ ಕಸಿದುಕೊಳ್ಳುತ್ತಿದ್ದವನ ಬಂಧನ

ಬಂಧಿತ ಆರೋಪಿಯೊಂದಿಗೆ ಪೊಲೀಸ್ ತಂಡ
ಬಂಧಿತ ಆರೋಪಿಯೊಂದಿಗೆ ಪೊಲೀಸ್ ತಂಡ
Published on
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕುರುಬೂರು, ನಾಯಿಂದ್ರ ಹಳ್ಳಿ, ನಡಂಪಲ್ಲಿಯಲ್ಲಿ ಸರಣಿ ಸರಗಳ್ಳತನ ಮಾಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಚಿಂತಾಮಣಿ ತಾಲೂಕಿನ ಕದಿರಾಪುರ ಗ್ರಾಮದ ಕೆ.ಎನ್.ಚಂದ್ರ (26) ಆರೋಪಿ. ಈತನಿಂದ ೬,೧೬.೬೪ ರೂಗಳ ಬೆಲೆಬಾಳುವ ೩೯.೭೬೦ ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಳೆದ ಜ.೨ ರಂದು ನಡಂಪಲ್ಲಿಯ ಸರಸ್ವತಮ್ಮಳ 2 ಲಕ್ಷ ರೂ ಮೌಲ್ಯದ ಕಿವಿಯೊಲೆ, ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಮನೆಯ ಮುಂದೆ ಕೊಯ್ದಕೊಂಡ ಬಂದಿದ್ದ ಪೊರಕೆ ಕಡ್ಡಿಗಳನ್ನು ಕ್ಲೀನ್ ಮಾಡು ತ್ತಿದ್ದಾಗ ಅವರ ಮನೆ ಬಳಿ ಹೋಗಿ ಬೆದರಿಸಿದ್ದ. ಇನ್ನು ಕಳೆದ ಏ.೧ ರಂದು ಕುರುಬೂರು ಗ್ರಾಮದ ಕೆರೆಯ ಬಳಿ ಕುರಿಗಳನ್ನು ಮೇಯಿಸುತ್ತಿದ್ದ ಪದ್ಮಾ ಎಂಬ ಮಹಿಳೆಗೆ ಚಾಕು ತೋರಿಸಿ ಆಕೆಯ ಕಿವಿಯಲ್ಲಿದ್ದ ಚಿನ್ನದ ಓಲೆ ಮತ್ತು ಕತ್ತಿನಲ್ಲಿದ್ದ ತಾಳಿ ಬೊಟ್ಟು ಸೇರಿ ಸುಮಾರು ೧೫-೨೦ ಗ್ರಾಂ ತೂಕದ ಚಿನ್ನಾಭರಗಳನ್ನು ಕಸಿದುಕೊಂಡಿದ್ದ. ಕಳೆದ
ಏ.೩ ರಂದು ನಾಯಿಂದ್ರಹಳ್ಳಿ ವೃದ್ಧೆ ಲಕ್ಷ್ಮೀ ನಾರಾಯಣಮ್ಮರನ್ನು ತೋಟದ ಬಳಿ ಅಡ್ಡಗಟ್ಟಿ ಚಾಕು ತೋರಿಸಿ ಆಕೆಯ ಕತ್ತಿನಲ್ಲಿ ಕರಿಮಣಿಗಳ ೮ ಗ್ರಾಂ ಚಿನ್ನದ ಗುಂಡಗಳ ಸರವನ್ನು ಕಿತ್ತುಕೊಂಡಿದ್ದ.
ಸರಣಿ ಸರಗಳ್ಳತನ ಪ್ರಕರಣ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಕುಶಲ್ ಚೌಕ್ಸೆ, ಅಡಿಷನಲ್ ಎಸ್ಪಿ ಜಗನ್ನಾಥ ರೈ ಮಾರ್ಗದರ್ಶನದಲ್ಲಿ ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಮುರಳೀಧರ್ ಹಾಗೂ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವರಾಜ್ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net