ಜೆನ್ ಜಿ ಜನರೇಶನ್ ಗೆ ಇಷ್ಟವಾಗುವ ಮದರ್ ಪ್ರಾಮಿಸ್ ಸಿನಿಮಾ ನಿರ್ಮಾಣ

ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ನಟ ಡಾಲಿ ಧನಂಜಯರನ್ನು ಸನ್ಮಾನಿಸಲಾಯಿತು.
ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ನಟ ಡಾಲಿ ಧನಂಜಯರನ್ನು ಸನ್ಮಾನಿಸಲಾಯಿತು.
Published on

ಚಿಕ್ಕಬಳ್ಳಾಪುರ:ರಾತ್ರೋ ರಾತ್ರಿಶ್ರೀಮಂತರಾಗಲು ಸಾಧ್ಯವಿಲ್ಲ.ಎಲ್ಲದಕ್ಕೂ ಸಮಯಬರಬೇಕು‌. ಮುಖ್ಯವಾಗಿಪ್ರಾಮಾಣಿಕ ಗುರಿಸಾಧನೆಯ ಪರಿಶ್ರಮಅಗತ್ಯ ಎಂದುಕನ್ನಡ ಚಿತ್ರನಟ,ನಿರ್ದೇಶಕ ಡಾಲಿಧನಂಜಯ್ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರತಾಲೂಕಿನ ಬೀಡಗಾನಹಳ್ಳಿಸಮೀಪದ ನಾಗಾರ್ಜುನಇಂಜಿನಿಯರಿಂಗ್ ಮತ್ತುತಾಂತ್ರಿಕ ಮಹಾವಿದ್ಯಾಲಯದಲ್ಲಿಕೈಗೊಂಡಿದ್ದ ಐಕ್ಯ- 2026 ಉದ್ಘಾಟನಾ ಸಮಾರಂಭವನ್ನುದ್ದೇಶಿಸಿಮಾತನಾಡಿದರು.
ಪ್ರತಿಯೊಂದು ಕ್ಷಣವುಬಹುಮುಖ್ಯವಾದುದು. ಅದರಲ್ಲೂವಿದ್ಯಾರ್ಥಿ ಕಾಲಘಟ್ಟವುಉಜ್ವಲ ಭವಿಷ್ಯರೂಪಿಸಿಕೊಳ್ಳುವಲ್ಲಿ ಒಳ್ಳೆಯಪರಿಣಾಮ ಬೀರುತ್ತದೆ.ಇದಕ್ಕೆ ನಿರಂತರವಾಗಿಸಕ್ರಿಯ ಚಟುವಟಿಕೆಯತೊಡಗಿಸಿಕೊಂಡು ಪ್ರತಿಭೆಯನ್ನುಪ್ರದರ್ಶಿಸಬೇಕು ಎಂದುಸಲಹೆ ನೀಡಿದರು. ಅಂದುಕೊಂಡಂತೆ ಎಲ್ಲವನ್ನೂಸಾಧಿಸಲು ಸಾಧ್ಯವಿಲ್ಲ.ಆದರೆ, ಮರಳಿಮರಳಿ ಪ್ರಯತ್ನವುಯಶಸ್ಸನ್ನು ತಂದುಕೊಡುತ್ತದೆ.ಇದಕ್ಕೆ ಎಂದಿಗೂಧೃತಿಗೆಡಬಾರದು. ಗೆಲವುಸೋಲನ್ನು ಸಮಾನವಾಗಿಒಪ್ಪಿಕೊಳ್ಳುವ ಮನಸ್ಥಿತಿಬೆಳೆಸಿಕೊಳ್ಳಬೇಕು. ಒಮ್ಮೆಸೋಲನ್ನೂ ಅನುಭವಿಸಬೇಕಾಗುತ್ತದೆ.ಆದರೆ, ಇದರಅನುಭವ ಗೆಲುವಿನದಾರಿ ಕಂಡುಕೊಳ್ಳಲುಸಹಕಾರಿಯಾಗುತ್ತದೆ ಎಂದರು.
ಇದೀಗ ಜೆನ್ಜಿ ಜನರೇಶನ್ಬಂದಿದೆ. ವಲಯವನ್ನು ಗಮನದಲ್ಲಿಟ್ಟುಕೊಂಡುಮದರ್ ಪ್ರಾಮಿಸ್ಎಂಬ ಹೊಚ್ಚಹೊಸಸಿನಿಮಾ ಮಾಡಲಾಗಿದೆ.ಕುಟುಂಬಸ್ಥರೆಲ್ಲರೂ ಕುಳಿತುವೀಕ್ಷಿಸುವ, ನಕ್ಕುನಲಿಯುವ ಸಿನಿಮಾಎಲ್ಲರೂ ನೋಡಿಆನಂದಿಸಬೇಕು. ಚಲನಚಿತ್ರ ಮಂದಿರಗಳಲ್ಲಿಯೇ ಕನ್ನಡಸಿನಿಮಾಗಳನ್ನು ವೀಕ್ಷಿಸುವಮೂಲಕ ಬೆಂಬಲಿಸಬೇಕುಎಂದು ಧನುಂಜಯ್ಮನವಿ ಮಾಡಿದರು.ಕ್ಲಾಸಿಕಲ್ ಸೋಲೋ,ವೆಸ್ಟರ್ನ್ ಸೋಲೋ,ಫ್ಯಾಷನ್ ವಾಕ್ನಲ್ಲಿ ಸ್ಪರ್ಧಿಗಳುಆಕರ್ಷಕ ಉಡುಗೆತೊಡುಗೆಯಲ್ಲಿ ಮಿಂಚಿದರು. ನೆರೆದಿದ್ದವರುಶಿಳ್ಳೆ, ಚಪ್ಪಾಳೆಮೂಲಕ ಮೆಚ್ಚುಗೆವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net