ಪಾರಂಪರಿಕ ಕಟ್ಟಡದ ಪರಂಪರೆ ಪ್ರಜ್ವಲಿಸಲಿ

ಚಿಂತಾಮಣಿ ನಗರದ ಬೆಂಂಗಳೂರು ಜೋಡಿ ರಸ್ತೆಯಲ್ಲಿರುವ ಪಶುವೈದ್ಯ ಆಸ್ಪತ್ರೆ.
ಚಿಂತಾಮಣಿ ನಗರದ ಬೆಂಂಗಳೂರು ಜೋಡಿ ರಸ್ತೆಯಲ್ಲಿರುವ ಪಶುವೈದ್ಯ ಆಸ್ಪತ್ರೆ.
Published on

ಪ್ರಮುಖ ಮುಖ್ಯಾಂಶಗಳು

  • ಪಾರಂಪರಿಕ ಕಟ್ಟಡದ ಪರಂಪರೆ ಪ್ರಜ್ವಲಿಸಲಿ
ಪಾರಂಪರಿಕ ಕಟ್ಟಡದ ಪರಂಪರೆ ಪ್ರಜ್ವಲಿಸಲಿ
ಚಿಂತಾಮಣಿ: ನಗರದ ಬೆಂಗಳೂರು ಜೋಡಿ ರಸ್ತೆಯಲ್ಲಿನ ಸರ್​ ಮಿರ್ಜಾ ಇಸ್ಮಾಯಿಲ್​ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲದಲ್ಲಿ ಉದ್ಘಾಟನೆಗೊಂಡ ಐತಿಹಾಸಿಕ ಪಶುವೈದ್ಯ ಆಸ್ಪತ್ರೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಅವಘಡ ಸಂಭವಿಸುವ ಮುನ್ನ ನವೀಕರಣ ಮಾಡಬೇಕಿದೆ.
ಹೌದು... ನಾಲ್ವಡಿ ಕೃಷ್ಣರಾಜ ಒಡೆಯರ್​ ಆಡಳಿತಾವಧಿಯಲ್ಲಿ ಜಾನುವಾರು ಆರೋಗ್ಯ ರಕ್ಷಣೆಗಾಗಿ 1936ರಲ್ಲಿ ಉದಾಟನೆಯಾಗಿದ್ದ ಈ ಐತಿಹಾಸಿಕ ಪಶುವೈದ್ಯ ಆಸ್ಪತ್ರೆ ಇಂದು ಅಧಿಕಾರಿಗಳು, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅವಸಾನದ ಅಂಚಿಗೆ ತಲುಪಿದೆ. ಸುಮಾರು 9 ದಶಕಗಳ ಇತಿಹಾಸವಿರುವ ಪಾರಂಪರಿಕ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೆ ಧೂಳು ಹಿಡಿದೆ.
ಮೈಸೂರು ಮಹಾರಾಜರು ಜಾನುವಾರುಗಳ ಮೇಲಿನ ಕಾಳಜಿಯಿಂದ ಸುಸಜ್ಜಿತ ಪಶುವೈದ್ಯ ಆಸ್ಪತ್ರೆ ನಿಮಾರ್ಣಕ್ಕೆ ಆದ್ಯತೆ ನೀಡಿದ್ದರು. ಚಿಂತಾಮಣಿಯಲ್ಲಿ ಪಶುವೈದ್ಯ ಕಟ್ಟಡ ಜಾಗ ಮತ್ತು ನಿಮಾರ್ಣಕ್ಕೆ ತಾಲೂಕಿನ ಚಿಲಕಲನೇರ್ಪು ಗ್ರಾಮದ ಶಾನುಭೋಗ ಸಂಜೀವಪ್ಪ ಸ್ಥಳ ಮತ್ತು ಕಟ್ಟಡವನ್ನು ಕೊಡುಗೆಯಾಗಿ ನೀಡಿದ್ದರು. 1936ರ ನವೆಂಬರ್​ 28ರಲ್ಲಿ ಸುಸಜ್ಜಿತ ಪಶುವೈದ್ಯ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗಿತ್ತು. ನಂತರ ಇದು ಚಿಂತಾಮಣಿ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ಪ್ರಮುಖ ಕೇಂದ್ರವಾಗಿತ್ತು.
ಪ್ರಸ್ತುತ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಛಾವಣಿ ಹೆಂಚುಗಳು ಸೋರುತ್ತಿವೆ. ಕಿಟಕಿ ಬಾಗಿಲುಗಳು ಹಾಳಾಗಿವೆ. ಪಾರಂಪರಿಕ ಶೈಲಿಯ ಸುಂದರ ಕಟ್ಟಡ ಬೀಳುವ ಭೀತಿ ಎದುರಿಸುತ್ತಿದೆ.
ಕಳೆದರಡು ದಿನಗಳ ಹಿಂದೆಯಷ್ಟೇ ಜಿಲ್ಲಾಧಿಕಾರಿ ಜಿ.ಪ್ರಭು ಅಕಾಲಿಕ ಮಳೆ, ಗಾಳಿ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಆಸ್ಪತ್ರೆ, ಶಾಲೆ, ಅಂಗನವಾಡಿ ಕೇಂದ್ರಗಳ ಕಟ್ಟಡಗಳನ್ನು ಗುರುತಿಸಿ ಸ್ಥಳಾಂತರಿಸುವ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಪಶು ಆಸ್ಪತ್ರೆಯ ಕಟ್ಟಡಕ್ಕೆ 90 ವರ್ಷಗಳ ಇತಿಹಾಸವಿದ್ದು, ಶಿಥಿಲವಾಸ್ಥೆಗೆ ತಲುಪಿದೆ. ಸದರಿ ಕಟ್ಟಡ ನೆಲಸಮವಾಗಿ ಇತಿಹಾಸದ ಪುಟ ಸೇರುವುದೋ ಅಥವಾ ನವೀಕರಣ ಮಾಡಿ ಪಾರಂಪರಿಕ ಕಟ್ಟಡವನ್ನು ಉಳಿಸಿಕೊಳ್ಳಲಾಗುವುದೋ ಕಾದು ನೋಡಬೇಕಾಗಿದೆ.
ನಮ್ಮ ತಾತ ಮತ್ತು ತಂದೆಯ ಕಾಲದಿಂದಲೂ ಆಸ್ಪತ್ರೆಗೆ ದನಕರುಗಳನ್ನು ಕರೆದುಕೊಂಡು ಬರುತ್ತಿದ್ದೆವು. ಪಕ್ಕದಲ್ಲಿ ಹೊಸ ಕಟ್ಟಡ ಹೆಚ್ಚುವರಿಯಾಗಿ ನಿಮಾರ್ಣವಾದ ನಂತರ ಪಾರಂಪರಿಕ ಕಟ್ಟಡವಾಗಿದ್ದ ಹಳೇ ಪಶವೈದ್ಯ ಆಸ್ಪತ್ರೆಯ ನಿರ್ವಹಣೆ ನಿರ್ಲಕ್ಷ್ಯಕ್ಕೊಳಗಾಯಿತು. ಈ ಹಿನ್ನೆಲೆಯಲ್ಲಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಪಾರಂಪರಿಕ ಕಟ್ಟಡವನ್ನು ಸರ್ಕಾರ ತಕ್ಷಣವೇ ಜಿಣೋರ್ದ್ಧಾರ ಮಾಡಬೇಕು.
- ಆಂಜನಪ್ಪ, ಸ್ಥಳಿಯ ರೈತ
ಎಷ್ಟೋ ಪಾರಂಪರಿಕ ಕಟ್ಟಡಗಳು ಈಗಾಗಲೇ ಕಾಲಗರ್ಭ ಸೇರಿವೆ. ಅದೇ ಸಾಲಿಗೆ ಪಶು ಆಸ್ಪತ್ರೆಯೂ ಸೇರದಂತೆ ತಡೆಯಲು ಪಶುಪಾಲನಾ ಇಲಾಖೆ, ಪುರಾತತ್ವ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಅಳವಡಿಸಿಕೊಂಡು ಹಳೆಯ ಕಟ್ಟಡದ ಪಾರಂಪರಿಕ ಸೊಗಡನ್ನು ಉಳಿಸಿಕೊಳ್ಳುವ ಮೂಲಕ ಆಸ್ಪತ್ರೆಗೆ ಮರುಜೀವ ನೀಡಬೇಕಾಗಿದೆ.
- ಕುಂಟಿಗಡ್ಡ ಶಿವಣ್ಣ, ಪ್ರಾಣಿ ಪ್ರೇಮಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net