ಪ್ರತಿಭಾ ಕಾರಂಜಿ 1 ದಿನಕ್ಕೆ ಸೀಮಿತವಾಗದಿರಲಿ

 ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಕ್ಲಸ್ಟರ್​ಮಟ್ಟದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.
ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಕ್ಲಸ್ಟರ್​ಮಟ್ಟದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ಸಂಯೋಜಕ ನಾಗೇಶ್​ ಸಲಹೆ
  • ಮಕ್ಕಳ ಪ್ರತಿಭೆ ಹೊರತರಲು ಉತ್ತಮ ವೇದಿಕೆ
  • ಸರ್ಕಾರ 2002ರಲ್ಲಿ ಜಾರಿಗೆ
ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಪ್ರತಿಭಾ ಕಾರಂಜಿ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿಯೊಬ್ಬರಲ್ಲೂ ಇರುವ ಪ್ರತಿಭೆ ಹೊರಗಡೆ ತೆಗೆಯಲು ನಿರಂತರವಾಗಿ ನಡೆಯಬೇಕು ಎಂದು ಶಿಕ್ಷಣ ಸಂಯೋಜಕ ನಾಗೇಶ್​ ಹೇಳಿದರು.
ಏನಿಗದಲೆ ಶ್ರೀ ರಾಮಕೃಷ್ಣ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಿಲಕಲನೇರ್ಪು ಹೋಬಳಿ ಕ್ಲಸ್ಟರ್​ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಚಿಲಕಲನೇರ್ಪು ಸಿಆರ್​ಪಿ ರಾಮಚಂದ್ರಪ್ಪ ಮಾತನಾಡಿ, ಸರ್ಕಾರ 2002ರಲ್ಲಿ ಈ ಕಾರ್ಯಕ್ರಮ ಜಾರಿಗೆ ತಂದಿದೆ. ಮಕ್ಕಳ ಪ್ರತಿಭೆ ಹೊರತರಲು ಉತ್ತಮ ವೇದಿಕೆ ಎಂದರು.
ರಾಮಕೃಷ್ಣ ಪ್ರೌಢಶಾಲೆ ಮುಖ್ಯಶಿಕ್ಷಕ ಬಾಲಾಜಿ ಮಾತನಾಡಿ, ಪ್ರತಿಭಾ ಕಾರಂಜಿ ಉತ್ತಮ ಕಾರ್ಯಕ್ರಮವಾಗಿದ್ದು ಮಕ್ಕಳಲ್ಲಿ ಅಡಗಿದ ಭಯ, ನಾಚಿಕೆ ಸ್ವಭಾವ ದೂರ ಮಾಡುತ್ತದೆ ಎಂದರು.
ಸಂಸತ, ಅರೇಬಿಕ್​ ಧಾರ್ಮಿಕ ಪಠಣ, ಕನ್ನಡ, ಇಂಗ್ಲಿಷ್​, ಹಿಂದಿ ಭಾಷಣ, ಭಕ್ತೀಗಿತೆ, ಜಾನಪದ ಗೀತೆ, ಭಾವಗೀತೆ ಹಾಡುವ, ಕ್ಲೇ ಮಾಡಲಿಂಗ್​, ಛದ್ಮವೇಶ, ಕವ್ವಾಲಿ, ಗಝಲ್​, ಜಾನಪದ ನೃತ್ಯ, ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ವಿತರಿಸಲಾಯಿತು. ಕೈವಾರ ಹೋಬಳಿ ಇಸಿಒ ನಾಗೇಶ್​, ಬಿಆರ್​ಪಿ ನಜುಂಡೇಗೌಡ, ಸುಧಾಕರ್​, ಪದ್ಮನಾಭಚಾರಿ, ರಾಜಣ್ಣ, ಸುರೇಶ ಬಾಬು, ಶ್ರೀಧರ್​ ಹಿರೇಮಠ್​, ಶೋಭಾ, ವಾಣಿ ಮಂಜುನಾಥ್​, ಕಲ್ಪನಾ, ನಾಗರಾಜ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net