ಗ್ರಾಮಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಉಳಿಸಿ ಬೆಳೆಸಲಿ

ಚಿಂತಾಮಣಿ ಗಾಯನ ಸಮಾಜದಿಂದ ಬೆಂಗಳೂರಿನ ವಿದುಷಿ ಕುಮಾರಿ ಮಾಧುರಿ ಕೌಶಿಕ್​ಗೆ ನಾದ ಚಿಂತಾಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಶು ವೈದ್ಯ ಡಾ.ರಾವೇಂದ್ರ, ಚಿಂತಾಮಣಿ ಗಾಯನ ಸಮಾಜದ ಅಧ್ಯಕ್ಷ ಎಲ್​.ಎಸ್​.ನಾಗೇಂದ್ರರೆಡ್ಡಿ, ಶಾಲೆ ಪ್ರಾಂಶುಪಾಲರಾದ ಎನ್​.ಕೆ.ಪದ್ಮಾವತಿ ಇದ್ದರು.
ಚಿಂತಾಮಣಿ ಗಾಯನ ಸಮಾಜದಿಂದ ಬೆಂಗಳೂರಿನ ವಿದುಷಿ ಕುಮಾರಿ ಮಾಧುರಿ ಕೌಶಿಕ್​ಗೆ ನಾದ ಚಿಂತಾಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಶು ವೈದ್ಯ ಡಾ.ರಾವೇಂದ್ರ, ಚಿಂತಾಮಣಿ ಗಾಯನ ಸಮಾಜದ ಅಧ್ಯಕ್ಷ ಎಲ್​.ಎಸ್​.ನಾಗೇಂದ್ರರೆಡ್ಡಿ, ಶಾಲೆ ಪ್ರಾಂಶುಪಾಲರಾದ ಎನ್​.ಕೆ.ಪದ್ಮಾವತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಉಳಿಸಿ ಬೆಳೆಸಲಿ
ಗ್ರಾಮಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಉಳಿಸಿ ಬೆಳೆಸಲಿ

ಚಿಂತಾಮಣಿ:

ಗ್ರಾಮೀಣ ಪ್ರದೇಶದಲ್ಲಿಯೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುತ್ತಿರುವ ಚಿಂತಾಮಣಿ ಸಂಗೀತ ವಿದ್ಯಾಲಯ ಕಾರ್ಯವನ್ನು ಬೆಂಗಳೂರಿನ ವಿದುಷಿ ಕುಮಾರಿ ಮಾಧುರಿ ಕೌಶಿಕ್​ ಶ್ಲಾಘಿಸಿದರು.

ನಗರದ ರಾಜೀವನಗರ ಬಡಾವಣೆಯಲ್ಲಿನ ಚಿಂತಾಮಣಿ ಸಂಗೀತ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂಗೀತ ವಿಶ್ವವಿದ್ಯಾಲಯದ 14ನೇ ವಾರ್ಷಿಕೋತ್ಸವದ ಪ್ರಯಕ್ತ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾದ ಚಿಂತಾಮಣಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮಹಾನಗರಗಳಲ್ಲಿ ಸಂಗೀತ ಚಟುವಟಿಕೆಗಳು ಸಾಮಾನ್ಯವಾಗಿದ್ದರೂ, ಚಿಂತಾಮಣಿಯಂತಹ ಪ್ರದೇಶದಲ್ಲಿ ಸಂಗೀತವನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸಲು ವಿದ್ಯಾಲಯದ ಸೇವೆ ಅಭಿನಂದನೀಯವಾಗಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಹವ್ಯಾಸವೆಂದು ಪರಿಗಣಿಸದೆ, ಅದು ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಿ ಪರೀೆಗಳಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಸಂಗೀತಾಭ್ಯಾಸದಿಂದ ಮಾನಸಿಕ ಶಾಂತಿ, ಶಿಸ್ತು ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುವುದಲ್ಲದೆ, ದೇವರ ನಾಮಸ್ಮರಣೆಯ ಮೂಲಕ ಆಧ್ಯಾತ್ಮಿಕ ಮೌಲ್ಯಗಳೂ ಬೆಳೆಸಿಕೊಳ್ಳಬಹುದು ಎಂದರು.
ಪಶು ವೈದ್ಯ ಡಾ.ರಾವೇಂದ್ರ ಮಾತನಾಡಿ, ಸಂಗೀತವು ಮನರಂಜನೆಗೆ ಸೀಮಿತವಾಗಿಲ್ಲ. ಏಕಾಗ್ರತೆ ಹೆಚ್ಚಿಸುವುದರ ಜತೆಗೆ ಆರೋಗ್ಯ ವೃದ್ಧಿಗೂ ಸಹಕಾರಿಯಾಗುವ ಶಕ್ತಿಯನ್ನು ಹೊಂದಿದೆ.
ತಾವು ವೃತ್ತಿಯಲ್ಲಿ ಪಶು ವೈದ್ಯರಾಗಿದ್ದು, ಸಂಗೀತ ಜ್ಞಾನಿಯಾಗಿರದಿದ್ದರೂ ಸಂಗೀತದ ಮಹತ್ವವನ್ನು ವೃತ್ತಿಯ ಅನುಭವದ ಮೂಲಕ ಅರಿತಿರುವುದಾಗಿ ತಿಳಿಸಿದರು. ಪಶು ವೈದ್ಯಕಿಯ ೇತ್ರದಲ್ಲಿ ಹಸುಗಳಿಗೆ ಸಂಗೀತವನ್ನು ಕೇಳಿಸುವ ಮೂಲಕ ಹಾಲಿನ ಉತ್ಪಾದನೆ ಹೆಚ್ಚಿದ ಉದಾಹರಣೆಗಳಿದ್ದು, ಸಂಗೀತದ ಪರಿಣಾಮವನ್ನು ವೈಜ್ಞಾನಿಕ ಅಧ್ಯಯನಗಳು ದೃಢಪಡಿಸಿವೆ.

ಚಿಂತಾಮಣಿ ಸಂಗೀತ ಮಹಾವಿದ್ಯಾಲಯವು ಸಂಗೀತ ಶಿಕ್ಷಣ ಮತ್ತು ಭಾರತೀಯ ಸಂಸತಿಯ ಉಳಿವಿಗಾಗಿ ಕೈಗೊಂಡಿರುವ ಕಾರ್ಯ ಶ್ಲಾನೀಯವಾಗಿದೆ ಎಂದರು.

ಬೆಂಗಳೂರಿನ ವಿದುಷಿ ಕುಮಾರಿ ಮಾಧುರಿ ಕೌಶಿಕ್​ ಅವರಿಂದ ಹಾಡುಗಾರಿಕೆ ನಡೆಸಿಕೊಟ್ಟರು, ಅವರಿಗೆ ಪಕ್ಕ ವಾದ್ಯಗಳಲ್ಲಿ ವಿದುಷಿ ಸಿ.ವಿ.ಶೃತಿ, ಪಿಟೀಲು, ವಿದ್ವಾನ್​ ಆದಮ್ಯ ರಮಾನಂದರವರು ಮೃದಂಗ, ಕೈವಾರದ ವಿದ್ವಾನ್​ ರಾಮಕುಮಾರ್​ ಖಂಜಿರ ಮತ್ತು ಆರಂಗಿ ವೆಂಕಟರಾವ್​ ರವರು ಮೋರ್ಚಿಂಗ್​ ಸಾಥ್​ ನೀಡಿದರು.
ಪಿಟೀಲು ವಾದನದ ಶಿಕ್ಷಕ ಶಿಡ್ಲಟ್ಟದ ಶ್ಯಾಮಸುಂದರ್​, ಮೃದಂಗ ವಿದ್ವಾನ್​ ಪ್ರಕಾಶ್​, ವಿಜಯವಾಡದ ಸಂಗೀತ ವಿದ್ವಾನ್​ ಕೆ.ವಿ.ಬ್ರಹ್ಮಾನಂದಂ, ಶಿಕ್ಷಕಿ ಪ್ರಿಯಾ ಮತ್ತಿತರರು ಇದ್ದರು.
2.ಸಿ.ಎಂ.ವೈ.10
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net