ಜಾಗದ ಒತ್ತುವರಿ ವಿವಾದ, ಜನರ ವಿರೋಧದ ನಡುವೆ ಕಾರ್ಯಾಚರಣೆ

ಚಿಂತಾಮಣಿ ತಾಲೂಕಿನ ಗಾಜಲಹಳ್ಳಿಯಲ್ಲಿ ಕಾರ್ಯಾಚರಣೆ
ಚಿಂತಾಮಣಿ ತಾಲೂಕಿನ ಗಾಜಲಹಳ್ಳಿಯಲ್ಲಿ ಕಾರ್ಯಾಚರಣೆ
Published on
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಗಾಜಲಹಳ್ಳಿಯಲ್ಲಿ ಗ್ರಾಮಸ್ಥರು ಪ್ರತಿಭಟನೆಯ ನಡುವೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದು ಮಾತಿನ ಚಕಮಕಿಯಿಂದ ಕೆಲ ಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.
ವಿವಾದಿತ ಜಮೀನಿನ ಮಾಲೀಕರ ಪರ ನ್ಯಾಯಾಲಯದ ಆದೇಶವಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ನಡುವೆ ಅಧಿಕಾರಿಗಳು, ಆ ಜಾಗದಲ್ಲಿ ಅಳವಡಿಸಿದ್ದ ಅಂಬೇಡ್ಕರ್ ಭಾವಚಿತ್ರ ತೆಗೆದು, ಗುಡಿಸಲುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು.
ಗಾಜಲಹಳ್ಳಿ ಗ್ರಾಮದ ಸರ್ವೆ ನಂ.21 ರ ಸರ್ಕಾರಿ ಗೋಮಾಳ ಮತ್ತು ಖರಾಬ್ ಜಮೀನಲ್ಲಿ ಗಾಜಲಹಳ್ಳಿ ಗ್ರಾಮಸ್ಥರೆಲ್ಲ ತಿಪ್ಪೆಗುಂಡಿಗಳು ಹಾಕಿ ಕೊಂಡು ಹಸುಗಳನ್ನು ಮೇಯಿಸುತ್ತಿದ್ದರು. ಇದರ ನಡುವೆ ಗ್ರಾಮದಲ್ಲಿ ನೂರ ಆರವತ್ತು ಪರಿಶಿಷ್ಟ ಕುಟುಂಬಗಳಿದ್ದು ಅಂಬೇಡ್ಕರ್ ಭವನ ಮತ್ತು ವಸತಿ ರಹಿತರಿಗೆ ನಿವೇಶನ ಕೋಡಬೇಕು ಎಂದು ಒತ್ತಾಯಿಸಿ, ಹಲವು ಬಾರಿ ಪ್ರತಿಭಟಿಸಿದ್ದು ಇದರ ನಡುವೆ ಖರೀದಿಯ ಜಾಗದಲ್ಲಿ ಅಕ್ರಮ ಗುಡಿಸಲು, ಶಾಮೀಯಾನ ಹಾಕಿಕೊಂಡಿರುವುದರ ಬಗ್ಗೆ ಸಂಬಂಧಪಟ್ಟ ಜಮೀನಿನ ಮಾಲೀಕರು 2022 ರಲ್ಲಿ ಗ್ರಾಮಾಂತರ ಠಾಣೆಗೆ ದೂರು ಸಹ ನೀಡಿದ್ದರು. ನ್ಯಾಯಾಲಯದ ಮೆಟ್ಟಿಲೇರಿದ್ದರು. ಇವರ ಪರ ತೀರ್ಪು ಬಂದ ಹಿನ್ನೆಲೆಯಲ್ಲಿ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ ಪೆಕ್ಟರ್ ಶಿವರಾಜ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಇದಕ್ಕೆ ಮಹಿಳೆಯರು ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net