ವಿದ್ಯಾರ್ಥಿ ನಿಲಯಗಳಿಗೆ ನ್ಯಾಯಾಧೀಶರ ಪರಿಶೀಲನೆ, ಅನೈರ್ಮಲ್ಯಕ್ಕೆ ಬೇಸರ

ನ್ಯಾಯಾಧೀಶರಿಂದ ಪರಿಶೀಲನೆ
ನ್ಯಾಯಾಧೀಶರಿಂದ ಪರಿಶೀಲನೆ
Published on
ಚಿಕ್ಕಬಳ್ಳಾಪುರ: ವಿವಿಧ ವಿದ್ಯಾರ್ಥಿ ನಿಲಯಗಳಿಗೆ ನ್ಯಾಯಾಧೀಶರ ತಂಡವು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ್ದು ಅವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ಅಣಕನೂರು ಸಮೀಪದ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಪರಿಶಿಷ್ಟ ವರ್ಗಗಳ ಮೆಟ್ರಿಕ್‌ನಂತರ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ನೇತೃತ್ವದ ತಂಡವು ಭೇಟಿ ನೀಡಿತು. ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿತು. ವಿದ್ಯಾರ್ಥಿಗಳಿಂದ ಸೌಕರ್ಯಗಳು ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಿತು. ಇದೇ ವೇಳೆ ಶೌಚಗೃಹ, ಸ್ನಾನದ ಕೊಠಡಿ ಬಾಗಿಲು ಮುರಿದಿರುವುದು ಬೆಳಕಿಗೆ ಬಂತು. ಇನ್ನು ಸ್ವಚ್ಛತೆಯ ಸಮರ್ಪಕ ನಿರ್ವಹಣೆಯ ಬಗೆಗಿನ ಲೋಪಗಳಿಗೆ ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವುದಕ್ಕೆ ಪೂರಕವಾಗಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಒತ್ತು ನೀಡಬೇಕು ಎಂದರು.
ನ್ಯಾಯಾಧೀಶರಾದ ಎಸ್.ವಿ.ಕಾಂತರಾಜು, ಪ್ರೇಮಕುಮಾರ್‌, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net