ಬಾಗೇಪಲ್ಲಿ ತಾಲೂಕಿನ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕ ಲಕ್ಷ್ಮೀಪತಿ ವಿದ್ಯಾರ್ಥಿಗಳಿಗೆ ಶಬ್ದಕೋಶ ನೀಡಿದರು.ಮುಖ್ಯಶಿಕ್ಷಕ ಲಕ್ಷ್ಮೀಪತಿ, ಶಿಕ್ಷಕರಾದ ವೆಂಕಟರವಣ, ಅತಿಥಿ ಶಿಕ್ಷಕಿ ಮಂಜುಳಾ, ಎಸ್ಡಿಎಂಸಿ ಸದಸ್ಯರಾದ ಈಶ್ವರ, ನಾರಾಯಣಪ್ಪ, ಲಕ್ಷ್ಮೀದೇವಮ್ಮ, ವೆಂಕಟರಾಮಪ್ಪ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಸ್ಡಿಎಂಸಿ ಅಧ್ಯಕ್ಷ ಶಂಕರಪ್ಪ ಸಲಹೆ
ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಲಿಸಲು ಮುಂದಾಗಬೇಕು
ಕೊಡುಗೆಯಾಗಿ ನೀಡಿದ ಶಬ್ದಕೋಶ
ವಿಜಯವಾಣಿ ಸುದ್ದಿಜಾಲ ಪಾತಪಾಳ್ಯ
ಕನ್ನಡ ಕಲಿಯುವ ಜತೆಗೆ ಬದುಕನ್ನು ರೂಪಿಸುವ ಆಂಗ್ಲ ಭಾಷೆಯನ್ನು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ
ಕಲಿಸಲು ಮುಂದಾಗಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಶಂಕರಪ್ಪ ತಿಳಿಸಿದರು.
ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬೆಂಗಳೂರಿನ ಆಲ್ ಹ್ಯಾಂಡ್ಸ್ ಟುಗೆದರ್ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ಸದಸ್ಯ ಕೆ.ಪಿ.ಚಂದ್ರಶೇಖರ್ ಮತ್ತು ಸ್ನೇಹಿತರು ಕೊಡುಗೆಯಾಗಿ ನೀಡಿದ ಶಬ್ದಕೋಶ ವಿತರಿಸಿ ಮಾತನಾಡಿದರು.
ಎಲ್ಲ ಭಾಷೆ ಜ್ಞಾನ ಪಡೆಯುವುದು ಈಗ ತೀರ ಅಗತ್ಯ. ಅದರಲ್ಲೂ ಇಂಗ್ಲೀಷ್, ಹಿಂದಿ ಕಲಿತರೆ ಮಕ್ಕಳು ಸರ್ವಾಂಗೀಣ ಪ್ರಗತಿಗೆ ಪೂರಕವಾಗಲಿದೆ ಎಂದರು.
ಶಿಕ್ಷಕಿ ಶಂಷಿಯಾಬಾನು ಮಾತನಾಡಿ, ಆಂಗ್ಲ ಕಲಿಕೆಯಿಂದ ಎಲ್ಲ ಪ್ರದೇಶಗಳ ಜನರೊಂದಿಗೆ ಸಂವಹನ ನಡೆಸಲು ಉಪಯೋಗವಾಗುತ್ತದೆ. ಮುಂದಿನ ವ್ಯಾಸಂಗಕ್ಕೂ ಅನುಕೂಲ ಎಂದರು.
ಶಿಕ್ಷಕ ಅನಂತಮೂರ್ತಿ ಮಾತನಾಡಿ, ಹಿಂದಿನ ಶಿಕ್ಷಣಕ್ಕೆ ಹೋಲಿಸಿದಾಗ ಈಗ ಸಾಕಷ್ಟು ಬದಲಾವಣೆಗಳಾಗಿದ್ದು, ಪ್ರತಿಯೊಂದು ಹಂತದಲ್ಲೂ ಇಂಗ್ಲೀಷ್ ಅನಿವಾರ್ಯ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವರು ಭಾಷೆಯನ್ನು ಸಾಕಷ್ಟು ಅರಿಯದೇ ಇದ್ದು ತಪ್ಪುತಪ್ಪಾಗಿ ಮಾತನಾಡಿ ನಗೆಪಾಟಲಿಗೀಡಾಗಿರುವ ಸಂದರ್ಭಗಳು ಜರುಗಿವೆ. ಆದ್ದರಿಂದ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಇಂಗ್ಲಿಷ್ ಚೆನ್ನಾಗಿ ಕಲಿಯಬೇಕು. ಮಕ್ಕಳು ಇಂಗ್ಲಿಷ್ ಕಲಿಯಲಿ ಎಂಬ ಉದ್ದೇಶದಿಂದ ಟ್ರಸ್ಟ್ ಸದಸ್ಯ ಕೆ.ಪಿ.ಚಂದ್ರಶೇಖರ್ ಮತ್ತು ಸ್ನೇಹಿತರು ಶಬ್ದಕೋಶ ಕೊಡುಗೆಯಾಗಿ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.