

ಬಾಗೇಪಲ್ಲಿ:
ಸಿಎಂ ಆದೇಶದಂತೆ ಹಕ್ಕುಪತ್ರ ವಿತರಣೆ ಕಾರ್ಯಕ್ಕೆ ವೇಗ ಕೊಟ್ಟು ಅರ್ಹರನ್ನು ಗುರುತಿಸಬೇಕು. ವಾಸದ ಮನೆ ದಾಖಲೆ ಇಲ್ಲದ ಕೃಷಿಕರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಮಾತ್ರ ಸರ್ಕಾರದಿಂದ ಹಕ್ಕುಪತ್ರ ನೀಡಲಾಗುತ್ತದೆ, ಈಗಾಗಲೇ ಮನೆ ಇದ್ದು ಹಕ್ಕುಪತ್ರ ನೀಡಿರುವವರಿಗೆ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ವಾಸವಿರುವ ಹಾಗೂ ಕೃಷಿ ಕಾರ್ಮಿಕರು ಆಗಿರುವ ಅರ್ಹರಿಗೆ ಮಾತ್ರ ಈ ಯೋಜನೆಯಡಿ ಸರ್ಕಾರದಿಂದ ವಾಸದ ಮನೆಯ ಹಕ್ಕುಪತ್ರ ವಿತರಣೆ ಮಾಡಲಿದ್ದೆವೆ.
ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ನೈಜತೆ ಆಧಾರಿತವಾಗಿ ಕೃಷಿ ಮತ್ತು ಕೃಷಿ ಕಾರ್ಮಿಕರನ್ನು ಗುರುತಿಸಿ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಲಿದ್ದಾರೆ, ಭೂ ಮಂಜೂರಾತಿ ಕಾಯದೆ ಪ್ರಕಾರ ದಾಖಲೆ ರಹಿತ ಮನೆ ಹೊಂದಿರುವ ಅರ್ಹರಿಗೆ ಹಕ್ಕುಪತ್ರ ನೀಡಲಾಗುತ್ತದೆ. ದಾಖಲೆ ರಹಿತ ಹಾಗೂ ವಾಸದ ಮನೆಗೆ ಬಳಕೆ ಮಾಡಿಕೊಳ್ಳುತ್ತಿರುವವರು ಮಾತ್ರ ಈ ಯೋಜನೆಗೆ ಅರ್ಹರಾಗಿದ್ದು, ಸರ್ಕಾರದಿಂದ ಈಗಾಗಲೇ ಹಕ್ಕುಪತ್ರ ಪಡೆದುಕೊಂಡಿರುವ ಹಾಗೂ 2&3 ಕಡೆ ಮನೆ ಹೊಂದಿರುವವರಿಗೆ ಭೂ ಸುಧಾರಣೆ ಕಾಯ್ದೆ ಪ್ರಕಾರ ಸರ್ಕಾರದಿಂದ ಹಕ್ಕುಪತ್ರ ನೀಡಲು ಅವಕಾಶ ಇರುವುದಿಲ್ಲ. ಕಂದಾಯ ಮತ್ತು ತಾಪಂ ಎರಡು ಇಲಾಖೆ ಅಧಿಕಾರಿಗಳು ಸರ್ಕಾರಿ ಮಾನದಂಡನೆಗಳನ್ನು ಪಾಲಿಸಿ ಅರ್ಹರನ್ನು ಮಾತ್ರ ಗುರುತಿಸಿ ಸರ್ಕಾರಕ್ಕೆ ಪಟ್ಟಿ ಕಳುಹಿಸಬೇಕಾಗಿದೆ ಎಂದು ಸೂಚಿಸಿದರು.
ಡಿಡಿಎಲ್ಆರ್ ಮಂಜುನಾಥ, ತಹಶೀಲ್ದಾರ್ಗಳಾದ ಬಿ.ಕೆ.ಶ್ವೇತಾ, ಮನೀಷಾಪತ್ರಿ, ಸಿಗ್ಬತ್ವುಲ್ಲಾ, ಇಒ ನಾಗಮಣಿ, ಎಡಿಎಲ್ಆರ್ ಮಂಜುನಾಥ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.