ನರೇಗಾ ಉಳಿಸಿ, ವಿಬಿಜಿ ರಾಮ್ಜಿ ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂ ಹಾಗೂ ತಾಲೂಕು ಸಿಪಿಎಂ ಪಕ್ಷದ ಮುಖಂಡರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರ ಪರವಾಗಿ ಕಚೇರಿ ವ್ಯವಸ್ಥಾಪಕ ರಾಮಾಂಜಿ ಅವರಿಗೆ ಮನವಿ ಸಲ್ಲಿಸಿದರು. ಸಂದ ಪದಾಧಿಕಾರಿಗಳಾದ ದೊಡ್ಡ ವೆಂಕಟರಾಯಪ್ಪ, ರಮಣ, ವೆಂಕಟರೋಣಪ್ಪ, ಆದಿನಾರಾಯಣಪ್ಪ, ವಿನೋದ್ ಕುಮಾರ್, ನಾಗರಾಜ, ಗಂಗರಾಜ, ಅಶ್ವತ್ಥಪ್ಪ, ಲ್ಮನರಸಪ್ಪ, ಅಂಜಿನಪ್ಪ ಇತರರು ಇದ್ದರು.
ಗುಡಿಬಂಡೆ:ನರೇಗಾ ಉಳಿಸಿ, ವಿಬಿಜಿ ರಾಮ್ಜಿ ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂ ಹಾಗೂ ತಾಲೂಕು ಸಿಪಿಎಂ ಪಕ್ಷದ ಮುಖಂಡರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಬುಧವಾರ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಮುನಿಯಪ್ಪ ಮಾತನಾಡಿ, ಕೇಂದ್ರ ಸರ್ಕಾರ ಸಾಮಾನ್ಯ ಕೂಲಿಕಾರರಿಗೆ ಅನುಕೂಲ ಆಗಿರುವ ಮನರೇಗಾವನ್ನು ರದ್ದುಗೊಳಿಸಿ, ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಆಗುವಂತಹ ವಿಬಿಜಿ ರಾಮ್ಜಿ ಯನ್ನು ಜಾರಿಗೊಳಿಸಿದ್ದು ಜುಲೈ&1 ರಿಂದ ಅನುಷ್ಠಾನಕ್ಕೆ ಮುಂದಾಗಿದೆ. ಇದರಿಂದ ಸಾಮಾನ್ಯ ಬಡ ಕೂಲಿಕಾರರಿಗೆ ತುಂಬಾ ತೊಂದರೆ ಆಗುತ್ತಿದೆ. ಹಾಗಾಗಿ ಕೂಡಲೇ ವಿಬಿಜಿ ರಾಮ್ಜಿಯನ್ನು ರದ್ದುಗೊಳಿಸಿ ಈ ಹಿಂದೆ ಇದ್ದ ಮನರೇಗಾವನ್ನು ಪ್ರಾರಂಭಿಸಿ ಇಂದಿನಿಂದಲೇ ಕೂಲಿಕಾರರಿಗೆ ಕೆಲಸ ಕೊಡಬೇಕು, ಕನಿಷ್ಠ 700ರೂ. ಕೂಲಿನೀಡಬೇಕು ಎಂದು ಒತ್ತಾಯಿಸಿದರು.
ಎನ್ಎಂಎಂಎಸ್ ಮತ್ತು ಇ ಕೆವೈಸಿಯಂತಹ ಅವೈಜ್ಞಾನಿಕ ತಂತ್ರಜ್ಞಾನಅಳವಡಿಸುವುದನ್ನು ಕೈ ಬಿಟ್ಟು, ಸರಳ ರೀತಿಯ ಕೂಲಿಕಾರರ ಹಾಜರಾತಿ ನಿರ್ವಹಿಸಬೇಕು.ಕೇಂದ್ರ ಸರ್ಕಾರ ಶೇ.60 ಅನುದಾನ ಕೊಡುತ್ತೇನೆಂದು ತಿಳಿಸಿದ್ದು, ಹಾಗೇ 75 ದಿನಗಳು ಕೆಲಸ ನೀಡಬೇಕು ಎಂದರು.
ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂದ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ವಿಬಿಜಿ ರಾಮ್ಜಿಯನ್ನು ಅನುಷ್ಠಾನ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದು, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯಡಿ ವರ್ಷದಲ್ಲಿ 100 ದಿನ ಕೆಲಸ ನೀಡಬೇಕು, ಮಳೆ ಇಲ್ಲದೇ ಬರಗಾಲ ಬಂದಿರುವುದರಿಂದ ಮತ್ತು ವಿಪರೀತ ಸೂರ್ಯನ ಕಿರಣ ಹೆಚ್ಚಿರುವುದರಿಂದ ಕೆಲಸವನ್ನು ಬೆಳಗ್ಗೆ 7 ರಿಂದ 11 ರವರೆಗೆ ನೀಡಬೇಕು, ಕೆಲಸದ ಸಂದರ್ಭದಲ್ಲಿ ಅನಾಹುತಗಳುಂಟಾದರೆ ಕೂಲಿಕಾರರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.