ಹೆಚ್ಚಿದ ಕಳಪೆ ಹೆಲ್ಮೆಟ್​ ಮಾರಾಟ

ಚಿಂತಾಮಣಿ ನಗರದ ಪಾದಚಾರಿ ರಸ್ತೆಯಲ್ಲಿ ಕಳಪೆ ಗುಣಮಟ್ಟದ ಹೆಲ್ಮೆಟ್​ಗಳು ಭರ್ಜರಿಯಾಗಿ ಮಾರಾಟ ಮಾಡುತ್ತಿರುವುದು.
ಚಿಂತಾಮಣಿ ನಗರದ ಪಾದಚಾರಿ ರಸ್ತೆಯಲ್ಲಿ ಕಳಪೆ ಗುಣಮಟ್ಟದ ಹೆಲ್ಮೆಟ್​ಗಳು ಭರ್ಜರಿಯಾಗಿ ಮಾರಾಟ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬೀದಿಬದಿಯಲ್ಲಿ ಕಳಪೆ ಹೆಲ್ಮೆಟ್​ಗಳ ಮಾರಾಟವೂ ಜೋರಾಗಿದೆ.
  • ಡಿ.12ರಿಂದ ಹೆಲ್ಮೆಟ್​ ಧರಿಸುವ ಬಗ್ಗೆ ಪೊಲೀಸ್​ ಇಲಾಖೆಯಿಂದ ಪ್ರಚಾರ
  • ಅರ್ಧ ಹೆಲ್ಮೆಟ್​ ಧರಿಸಿದರೆ ಅಪಘಾತ
ಚಿಂತಾಮಣಿ: ಬೀದಿಬದಿಯಲ್ಲಿ ಕಳಪೆ ಹೆಲ್ಮೆಟ್​ಗಳ ಮಾರಾಟವೂ ಜೋರಾಗಿದೆ. ಜಿಲ್ಲೆಯಾದ್ಯಂತ ಶುಕ್ರವಾರದಿಂದ ಬೈಕ್​ ಚಾಲಕ, ಹಿಂಬದಿ ಸವಾರರು ಹೆಲ್ಮೆಟ್​ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 1 ವಾರದಿಂದ ನಗರ, ಗ್ರಾಮೀಣದಲ್ಲಿ ಡಿ.12ರಿಂದ ಹೆಲ್ಮೆಟ್​ ಧರಿಸುವ ಬಗ್ಗೆ ಆಯಾ ಠಾಣಾ ವ್ಯಾಪ್ತಿಯ ಪೊಲೀಸ್​ ಇಲಾಖೆಯಿಂದ ಪ್ರಚಾರ ನಡೆಸಿದ್ದರಿಂದ ಹೆಲ್ಮೆಟ್​ ಬಳಕೆ ಹೆಚ್ಚಾಗಿದೆ. ಪೊಲೀಸರು ಕಾರ್ಯಾಚರಣೆ ಬಿಗಿಗೊಳಿಸಿದರಿಂದ ಹೆಲ್ಮೆಟ್​ ಧರಿಸಿ ವಾಹನ ಚಲಾಯಿಸುತ್ತಿದ್ದಾರೆ. ಹೆಲ್ಮೆಟ್​ಗಾಗಿ ಶೋರೂಮ್​, ಅಂಗಡಿಗಳಿಗೆ ಭೇಟಿ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ನಗರದ ತಹಸೀಲ್ದಾರ್​, ಬೆಂಗಳೂರು, ಚೇಳೂರು ವೃತ್ತದ ಬೀದಿಬದಿಯಲ್ಲಿ ವ್ಯಾಪಾರಿಗಳು ಹೆಲ್ಮೆಟ್​ ಮಾರಾಟ ಮಾಡುತ್ತಿದ್ದು ಮೊದಲ ದಿನ ಹೆಲ್ಮೆಟ್​ ಲಭಿಸಿದರೆ ಸಾಕು. ಆನಂತರ ಗುಣಮಟ್ಟದ ಹೆಲ್ಮೆಟ್​ ಖರೀದಿ ಮಾಡೋಣ ಎಂದು ಗುಣಮಟ್ಟ ಲೆಕ್ಕಿಸದೆ ಬೀದಿಬದಿ ಹೆಲ್ಮೆಟ್​ ಖರೀದಿಸುತ್ತಿದ್ದಾರೆ. ಇನ್ನು ಕಳಪೆ, ಅರ್ಧ ಹೆಲ್ಮೆಟ್​ ಧರಿಸಿದರೆ ಅಪಘಾತ ಸಂಭವಿಸಿದಾಗ ಪ್ರಾಣ ಹಾನಿ ಸಾಧ್ಯತೆಯಿದೆ. ಕಳಪೆ ಹೆಲ್ಮೆಟ್​ ಮಾರಾಟಗಾರರಿಗೆ ಪೊಲೀಸರು, ಸಾರಿಗೆ, ಕಾನೂನು ಮಾಪನಾ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿಬೇಕಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net