ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿಯೊಂದು ಇಲಾಖೆಗಳಲ್ಲೂ ಕಮೀಷನ್ ದಂಧೆ ನಡೆಯುತ್ತಿದೆ. ತಿಂಗಳಿಗೆ ಇಷ್ಟು ಹಣ ಕೊಡಬೇಕೆಂಬುದಾಗಿ ಹೇಳಿ, ಕಿರುಕುಳ ನೀಡಲಾಗುತ್ತಿದೆ. ಅಕ್ರಮ ಮರಳು ಸಾಗಾಣಿಕೆ ಮರು ಪ್ರಾರಂಭವಾಗಿದೆ. ಅಂತಾರಾಜ್ಯ ಮಟ್ಟದ ದರೋಡೆಕೋರ ಭಾಗಿಯ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಆಡಳಿತ ಯಂತ್ರಾಂಗದಲ್ಲಿ ಹಿಡಿತವಿಲ್ಲ. ಲಂಚ ಕೊಡಬೇಕಾಗಿರುವ ಪರಿಸ್ಥಿತಿಯಲ್ಲಿ ಅನೇಕ ಅಧಿಕಾರಿಗಳು ಅಸಹಾಯಕತೆಯಲ್ಲಿದ್ದು ಸ್ಥಳೀಯ ಜನಪ್ರತಿನಿಧಿಗಳು ಜಿಲ್ಲೆಯಲ್ಲಿನ ಅನಪೇಕ್ಷಿತ ವಿದ್ಯಮಾನಗಳು, ಅವ್ಯವಹಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಭ್ರಷ್ಟತೆಯಿಂದ ಪ್ರಶ್ನಿಸಲು ಹೋಗುತ್ತಿಲ್ಲ ಎಂದು ಸಂಸದರು ಆರೋಪಿಸಿದ್ದಾರೆ.