

ಪ್ರಮುಖ ಮುಖ್ಯಾಂಶಗಳು
ಗೌರಿಬಿದನೂರು:
ನಾನು ಮೂಗಿಗೆ ತುಪ್ಪ ಸವರುವವನಲ್ಲ. ಯಾವುದೇ ಕೆಲಸ ಪ್ರಾರಂಭಿಸಿದರೆ ಅದನ್ನು ಪೂರ್ಣಗೊಳಿಸುವವರೆಗೂ ನಿಲ್ಲುವುದಿಲ್ಲ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಹೇಳಿದರು.
ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಶಾಸಕ ಪುಟ್ಟಸ್ವಾಮಿ ಗೌಡರು ನಮ್ಮ ಸಮುದಾಯದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ನಮ್ಮ ನಡುವೆ ನಮ್ಮವರಂತೆ ಇದ್ದಾರೆ. ಅವರೊಂದಿಗೆ ನೀವು ಇರಬೇಕು. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಪಡೆದಿದ್ದರೂ ನಮ್ಮೊಂದಿಗಿದ್ದಾರೆ. ನೀವು ಅವರೊಂದಿಗೆ ಇರುವ ಮೂಲಕ ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಿ ಎಂದರು. ನನಗೆ ಗೌರಿಬಿದನೂರು ಬಗ್ಗೆ ಪ್ರೀತಿ. ಆದ್ದರಿಂದಲೇ ಸಂದವರು ಕರೆದ ತಕ್ಷಣ ಒಪ್ಪಿದೆ. ಈ ಹಿಂದೆ ಹಾಸ್ಟೆಲ್ ಕಟ್ಟಡ ಕಟ್ಟುವಾಗ ತಮ್ಮ ಪತ್ನಿ ವತ್ಸಲಾ ರೇವಣ್ಣ ಕಟ್ಟಡ ನಿರ್ಮಾಣಕ್ಕೆ ಮೊದಲ ಸಹಾಯ ಮಾಡಿದ್ದನ್ನು ನೆನೆದು ಭಾವುಕರಾದರು.
ತಾಲೂಕಿನಲ್ಲಿ ಸಮುದಾಯ ಶೈಕ್ಷಣಿಕವಾಗಿ ಮುಂದುವರಿದಿದೆ, ಆದರೆ ರಾಜಕೀಯವಾಗಿ ಮತ್ತಷ್ಟು ಗಟ್ಟಿಯಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಡಾ.ಕೆ.ಪಿ.ನಾರಾಯಣಪ್ಪ ಹೇಳಿದರು. ಸಮುದಾಯದಲ್ಲಿ ಸಂಟನೆ ಮತ್ತಷ್ಟು ಮೂಡಬೇಕು, ಒಗ್ಗಟ್ಟು ಮತ್ತು ಒಮ್ಮತದಿಂದ ನಾವೆಲ್ಲ ಸೇರಿ ಸಮುದಾಯದ ಕೆಲಸ ಮಾಡಬೇಕು. ರಾಜಕೀಯ ಸ್ಥಾನಮಾನಗಳಲ್ಲಿ ತಾಲೂಕು ಗಡಿ ದಾಟಿ ಹೋಗಿಲ್ಲ ಆದಕಾರಣ ಮುಂದಿನ ದಿನಗಳಲ್ಲಿ ಶಾಸಕರು ಸಮುದಾಯದವರನ್ನು ಗುರುತಿಸಿ ಮತ್ತಷ್ಟು ರಾಜಕೀಯ ಶಕ್ತಿ ತುಂಬಬೇಕು ಎಂದರು.