ಮುಖ್ಯಮಂತ್ರಿಯಾಗುವ ಆಸೆಯೂ ಇದೆ‌: ಶಾಸಕ ಪ್ರದೀಪ್‌ ಈಶ್ವರ್ ಹೇಳಿಕೆ!

ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಪ್ರದೀಪ್‌ ಈಶ್ವರ್
ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಪ್ರದೀಪ್‌ ಈಶ್ವರ್
Published on

ಚಿಕ್ಕಬಳ್ಳಾಪುರ

:

ಮಂತ್ರಿಯಾಗುವ,ಹಾಗೆಯೇ ಮುಖ್ಯಮಂತ್ರಿಯಾಗುವ ಆಸೆಯೂ ಇದೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಅಯ್ಯರ್‌ ತಿಳಿಸಿದ್ದಾರೆ. (

mla-pradeep-eshwar)

ಮಂಚೇನಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿಮಾತನಾಡಿದ ಅವರು, ರ್ಯಾಂಕ್‌ ಪಡೆಯುವ ಗುರಿಯೊಂದಿಗೆ ಪರೀಕ್ಷೆ ಬರೆಯಲಾಗುತ್ತದೆ. ಆದರೆ,ಒಮ್ಮೊಮ್ಮೆ ಅನುತ್ತೀರ್ಣರಾಗಿ ಬಿಟ್ಟರೆ ಏನು ಮಾಡೋದು?, ಮತ್ತೆ ಪೂರಕ ಪರೀಕ್ಷೆಯಲ್ಲಿಉತ್ತೀರ್ಣಗೊಳ್ಳೋದು ಅಷ್ಟೇ ಎಂದೇಳುವ ಮೂಲಕ ಸಚಿವ ಸ್ಥಾನದ ಅವಕಾಶ ಕೈ ತಪ್ಪಿರುವುದು ಹಾಗೂಮುಂಬರುವ ದಿನಗಳಲ್ಲಿ ಅವಕಾಶ ಸಿಗುವುದರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದಲ್ಲಿ ಯಾರಿಗೆ ಸ್ಥಾನಮಾನ ನೀಡಬೇಕೆನ್ನುವುದು ವರಿಷ್ಠರನಿರ್ಧಾರ. ಇದಕ್ಕೆ ಎಲ್ಲರೂ ಬದ್ಧರಾಗಿರಬೇಕು. ಮೊದಲಿನಿಂದಲೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದುಇದರಲ್ಲಿ ಯಾವುದೇ ರಾಜೀ ಇಲ್ಲ. ಮುಂಬರುವ ದಿನಗಳಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ. ಈಗಮಂತ್ರಿಯಾಗುವ, ಹಾಗೆಯೇ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಆಸೆಯನ್ನು ಹೊಂದಿರುವೆ ಎಂದುತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net