

ಚಿಕ್ಕಬಳ್ಳಾಪುರ:ಮಂಚೇನಹಳ್ಳಿ ತಾಲೂಕಿನ ಗಿಡಗಾನಹಳ್ಳಿಯಲ್ಲಿಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಕುತ್ತಿಗೆಗೆ ವೈರ್ ಬಿಗಿದು ಕೊಲೆಮಾಡಿದ್ದಾನೆ.
ಗ್ರಾಮದಪವಿತ್ರಾ (೩೫ ವರ್ಷ). ಆರೋಪಿ ವೆಂಕಟೇಶ್ (೪೨). ಕೊಲೆ ಮಾಡಿ ನಾಪತ್ತೆಯಾಗಿರುವ ಈತನನ್ನುಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ೧೫ ವರ್ಷಗಳ ಹಿಂದೆ ವಿವಾಹವಾಗಿರುವ ವೆಂಕಟೇಶ್ ಹಾಗೂ ಪವಿತ್ರಾ ದಂಪತಿಗೆ ಮೂವರು ಮಕ್ಕಳಿದ್ದಾರೆ.ಪತಿಗೆ ಕುಡಿತದ ಚಟ, ಮನೆಯಲ್ಲಿ ನಿರಂತರ ಗಲಾಟೆ, ಆರ್ಥಿಕವಾಗಿ ಸಾಲದ ಹೊರೆ ಸೇರಿದಂತೆ ವಿವಿಧವಿಚಾರವಾಗಿ ದಂಪತಿ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಇದರ ನಡುವೆ ಮನೆಯನ್ನುಅಡವಿಟ್ಟಿದ್ದು ಇದು ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪದ ಹಂತಕ್ಕೆ ಹೋಗಿದೆ. ಪತಿಯವರ್ತನೆಯನ್ನು ಪ್ರಶ್ನಿಸಿ, ನಿಂದಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವೆಂಕಟೇಶ್ ಕೋಪದಲ್ಲಿವೈರ್ ತೆಗೆದುಕೊಂಡು ಪತ್ನಿಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಮನೆ ಬಿಟ್ಟುಪರಾರಿಯಾಗಿದ್ದಾನೆ. ಘಟನೆಯ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆಭೇಟಿ ನೀಡಿ ಪರಿಶೀಲಿಸಿದ್ದಾರೆ.