ಚಿಂತಾಮಣಿ: ನಗರದ 23ನೇ ವಾರ್ಡಿನ ನೆಕ್ಕುಂದಿ ಪೇಟೆಯ ಗಾಣಿಗರ ಓಣಿಯಲ್ಲಿರುವ ಕೃಷ್ಣಸಿಂಗ್ ಅವರ ಬಾಡಿಗೆ ಮನೆಯಲ್ಲಿ ಭಾನುವಾರ ಸಂಭವಿಸಿದ ಯಾಗಿದೆ. ಮನೆಯಲ್ಲಿ ಫ್ರಿಡ್ಜ್, ಗೃಹಪಯೋಗಿ ವಸ್ತುಗಳು ಸೇರಿ ವೈರಿಂಗ್ ಸಂಪೂರ್ಣವಾಗಿ ಸುಟ್ಟು ಇಡೀ ಮನೆ ಕಪು$್ಪ ಬಣ್ಣಕ್ಕೆ ತಿರುಗಿದೆ. ಅಗ್ನಿಶಾಮಕ ದಳದ ಅಧಿಕಾರಿ ಲೋಕೇಶ್, ಸಿಬ್ಬಂದಿ ವೆಂಕಟ್ ಶಿವಾರೆಡ್ಡಿ, ವಿಷ್ಣು, ವಿವೇಕ್, ನಾಗರಾಜ್ ಬೆಂಕಿ ನಂದಿಸಿದರು. ಮನೆಯ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ವೈರಿಂಗ್, ವಿವಿಧ ಗೃಹಪಯೋಗಿ ವಸ್ತುಗಳು ಸುಟ್ಟಿವೆ. ಬೆಸ್ಕಾಂನ ಎಇ ಜಗದೀಶ್, ಸಿಬ್ಬಂದಿ ಸ್ಥಳ ಪರಿಶೀಲಿಸಿದರು. ಕೋತಿ ಕಾಟಕ್ಕೆ ವಿದ್ಯುತ್ ತಂತಿಗಳು ತಾಗಿ ಸಕ್ಯೂರ್ಟ್ ಸಂಭವಿಸಿದೆ ಎನ್ನಲಾಗಿದೆ.