

ಚಿಕ್ಕಬಳ್ಳಾಪುರ:ನಗರದ ಕಂದವಾರಪೇಟೆಯಲ್ಲಿ ತಡರಾತ್ರಿ ಅಪರಿಚಿತರು ಗೃಹಿಣಿಯೊಬ್ಬರ ಕತ್ತು ಕುಯ್ದು ಕೊಲೆ ಮಾಡಿದ ಬಳಿಕಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದ್ದು ಮೃತಳ ಪಾಲಕರು ಮಾತ್ರಆಕೆಯ ಗಂಡನ ಮನೆಯವರು ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
ಬೆಂಗಳೂರಿನಚುಂಚನಕಟ್ಟೆಯ ಮಹೇಶ್ ಹಾಗೂ ಲಕ್ಷ್ಮೀ ದಂಪತಿ ಪುತ್ರಿ ಪುಷ್ಪಲತಾ (೨೫) ಮೃತಳು. ಗುರುವಾರ ತಡರಾತ್ರಿಮನೆಗೆ ಅಪರಿಚಿತರು ಬಂದು ಕತ್ತು ಕುಯ್ದು ಬಳಿಕ ಮೈ ಮೇಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.ಇದೇ ವೇಳೆ ಮನೆಯಲ್ಲಿದ್ದ ಮೃತಳ ನಾದಿನಿ ಭವ್ಯಾಳಿಗೆ ಮಾತ್ರ ಮತ್ತು ಬರಿಸುವ ಔಷಧ ನೀಡಿ, ಬಟ್ಟೆಗೆಬಾಯಿಗೆ ತುರುಕಿದ್ದಾರೆ ಎನ್ನಲಾಗಿದೆ. ಪ್ರಕರಣವು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನುಗೃಹಿಣಿ ಕೊಲೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಳೆದನಾಲ್ಕು ವರ್ಷಗಳ ಹಿಂದೆ ಪುಷ್ಪಲತಾ ಹಾಗೂ ಭರತ್ ಗೆ ಮದುವೆಯಾಗಿದ್ದು ದಂಪತಿಯ ನಡುವೆ ನಿರಂತರ ಗಲಾಟೆಗಳುನಡೆಯುತ್ತಿದ್ದವು. ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ರಾಜೀ ಸಂಧಾನ, ಪಂಚಾಯಿತಿಗಳ ಮೂಲಕ ಇಬ್ಬರಮನವೊಲಿಸಲಾಗಿತ್ತು. ಆದರೂ ಹೊಂದಾಣಿಕೆಯಾಗಿಲ್ಲ. ಇದರ ನಡುವೆ ದೇವಸ್ಥಾನಕ್ಕೆ ಹೋಗುವ ನೆಪದಲ್ಲಿ ಮನೆಯಲ್ಲಿಪುಷ್ಪಲತಾರನ್ನು ಬಿಟ್ಟು ಹೋಗಿ, ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ದಂಪತಿಯನಡುವೆ ಕೌಟುಂಬಿಕ ಕಲಹವಿದ್ದರೂ ಸಹ ಸುಫಾರಿ ಕೊಟ್ಟು ಕೊಲೆ ಮಾಡುವ ಹಂತಕ್ಕೆ ಹೋಗುವವರಲ್ಲ. ಎಲ್ಲರಮನೆಯಲ್ಲೂ ಭಿನ್ನಾಭಿಪ್ರಾಯಗಳು ಇರುತ್ತವೆ. ದೇವಸ್ಥಾನಕ್ಕೆ ಹೋಗುವುದರ ಬಗ್ಗೆ ಗಮನ ಸೆಳೆದಾಗ ಪುಷ್ಪಲತಾಬರಲು ಒಪ್ಪಿಕೊಳ್ಳಲಿಲ್ಲ. ಮಗಳ ಜತೆ ಮನೆಯಲ್ಲಿ ಉಳಿದುಕೊಂಡಿದ್ದು ನಾವು ಪ್ರವಾಸದಲ್ಲಿದ್ದಾಗ ಕೊಲೆಯಮಾಹಿತಿ ತಿಳಿಯಿತು. ಪ್ರಕರಣದ ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಮೃತಳ ಅತ್ತೆ ವಿಜಯಮ್ಮತಿಳಿಸಿದ್ದಾರೆ.