

ಗುಡಿಬಂಡೆ: ಇಲ್ಲಿನಚೆಂಡೂರು ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ ೪೪ ರಲ್ಲಿಬೈಕಿಗೆ ಕ್ಯಾಂಟರ್ ಡಿಕ್ಕಿ ಹೊಡೆದು, ಅಣ್ಣ ತಮ್ಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುಡಿಬಂಡೆತಾಲೂಕಿನ ಯರ್ರಲಕ್ಕೇನಹಳ್ಳಿಯ ಗ್ರಾಮದ ಆಂಧ್ರ ಗಂಗಪ್ಪ ಎಂಬುವರಮಕ್ಕಳಾದ ವೈ.ಎ.ರಾಜಶೇಖರ್ ಮತ್ತು ವೈ.ಎ.ಬಾಲರಾಜು (೩೧) ಮೃತರು.
ಮೃತ ಬಾಲರಾಜುಗೆ ಕಳೆದ ಮೂರು ತಿಂಗಳ ಹಿಂದೆ ಅಪಘಾತ ಆಗಿದ್ದು, ಬಾಗೇಪಲ್ಲಿಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿ ಬರುತ್ತಿದ್ದರು. ಇದೇವೇಳೆ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದಅತಿವೇಗವಾಗಿ ಬಂದ ಕಂಟೇನರ್ ವಾಹನ ಡಿಕ್ಕಿ ಹೊಡೆದಿದೆ.ಇದರ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದವರು ರಸ್ತೆ ಮೇಲೆ ಬಿದ್ದಿದ್ದುಇಬ್ಬರ ತಲೆಗೆ ಗಂಭೀರವಾಗಿ ಗಾಯವಾಗಿದೆ. ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಕಂಟೇನರ್ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ಆಟೋಗೆ ಸಹ ಡಿಕ್ಕಿ ಹೊಡೆದಿದ್ದುಆಟೋ ಸಂಪೂರ್ಣ ಜಖಂ ಆಗಿದೆ.
ಕಂಟೇನರ್‌ಚಾಲಕನನ್ನು ಗುಡಿಬಂಡೆ ಪೊಲೀಸರು ಬಂಧಿಸಿದ್ದಾರೆ. ಮೃತ ದೇಹಗಳಮರಣೋತ್ತರ ಪರೀಕ್ಷೆಯನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿಕೈಗೊಳ್ಳಲಾಯಿತು. ದುರ್ಘಟನೆಯ ಸ್ಥಳಕ್ಕೆ ಎಸ್.ಪಿ ಪದ್ಮಿನಿ ಸಾಹು, ಎ.ಎಸ್.ಪಿ ಜಗನ್ನಾಥ್ ರೈಬೇಟಿ ನೀಡಿ ಪರಿಶೀಲಿಸಿದ್ದುಗುಡಿಬಂಡೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.