ಬೇಸಿಗೆಯಲ್ಲಿ ಆಲಿಕಲ್ಲು ಮಳೆ, ವರುಣನ ಆರ್ಭಟಕ್ಕೆ ವಿವಿಧೆಡೆ ಬೆಳೆ ಹಾನಿ

ಆಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆ ಹಾಳಾಗಿರುವುದನ್ನು ತೋರಿಸುತ್ತಿರುವ ರೈತ
ಆಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆ ಹಾಳಾಗಿರುವುದನ್ನು ತೋರಿಸುತ್ತಿರುವ ರೈತ
Published on

ಚಿಕ್ಕಬಳ್ಳಾಪುರ:ಬೇಸಿಗೆಯಲ್ಲಿ ಸುರಿದ ಮಳೆಗೆ ಹಲವೆಡೆ ಬೆಳೆ ಹಾನಿಯಾಗಿ, ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟದ ಅಳಲುತೋಡಿಕೊಂಡಿದ್ದಾರೆ.

ಕಳೆದ ಎರಡ್ಮೂರುದಿನಗಳಿಂದಲೂ ಈ ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ಇದ್ದು ಬಿಸಿಲಿನ ಬೇಗೆಗೆ ತತ್ತರಿಸಿರುವುದರನಡುವೆ ತಂಪು ಗಾಳಿ ಬೀಸುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ತಾಪಮಾನ ಕನಿಷ್ಠ 18 ಡಿಗ್ರಿಸೆಲ್ಸಿಯಷ್ಸ್‌ ಇದೆ. ಇದರಿಂದ ಸೆಖೆಗೆ ಬಳಲಿದ್ದ ಬಹುತೇಕ ಜನರು ಕೂಲ್‌ ಆಗಿರುವುದಕ್ಕೆಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಜೋರು ಗಾಳಿ ಸಮೇತ ಸುರಿದ ಮಳೆಗೆ ಅಲ್ಲಲ್ಲಿ ಹಾನಿಸಂಭವಿಸಿ, ನಷ್ಟ ಉಂಟಾಗಿರುವುದರ ಬಗ್ಗೆ ರೈತರಲು ಅಳಲು ತೋಡಿಕೊಳ್ಳುತ್ತಿದ್ದಾರೆ.

ಬುಧವಾರ ಸುರಿದಆಲಿಕಲ್ಲು ಮಳೆಗೆ ಚಿಕ್ಕಬಳ್ಳಾಪುರ ತಾಲೂಕಿನ ಅಡವಿಗೊಲ್ಲವಾರಹಳ್ಳಿ, ದಿಬ್ಬೂರು, ಈತಮಾಕಲಹಳ್ಳಿಸೇರಿದಂತೆ ವಿವಿಧ ಗ್ರಾಮಗಳಲ್ಲಿ ದ್ರಾಕ್ಷಿ, ದಾಳಿಂಬೆ, ಟೊಮ್ಯಾಟೋ ಬೆಳೆಗೆ ಹಾಳಾಗಿದೆ.

ಆಲಿಕಲ್ಲು ಮಳೆಗೆಅಡವಿಗೊಲ್ಲವಾರಹಳ್ಳಿಯಲ್ಲಿ ತೋಟದಲ್ಲಿನ ದ್ರಾಕ್ಷಿ ಹಣ್ಣುಗಳ ಮೇಲೆ ಮಚ್ಚೆ ಬಿದ್ದಿದ್ದು ಹಲವುಉದುರಿ ಹೋಗಿವೆ. ಬ್ಯಾಂಕಿನಲ್ಲಿ ಸಾಲ ಮಾಡಿ, ದುಬಾರಿ ನಿರ್ವಹಣೆಯ ವೆಚ್ಚದಲ್ಲಿ ದ್ರಾಕ್ಷಿಬೆಳೆಯಲಾಗಿತ್ತು. ಈಗ ನಷ್ಟ ಉಂಟಾಗಿದೆ ಎಂದು ದ್ರಾಕ್ಷಿ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.ಇನ್ನು ಗಿಡಗಳಲ್ಲಿನ ದಾಳಿಂಬೆ ಹಣ್ಣಿನ ಹೂವುಗಳು ಪ್ರಾರಂಭದ ಹಂತದಲ್ಲಿಯೇ ಉದುರಿವೆ.

ಮಳೆಯ ಹಾನಿಯ ಬಗ್ಗೆಮಾಹಿತಿ ತಿಳಿಯುತ್ತಿದ್ದಂತೆ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಷ್ಟದ ಸರ್ವೇ ಕಾರ್ಯಕೈಗೊಂಡಿದ್ದಾರೆ. ರೈತರ ಜಮೀನುಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದಾರೆ.ಪ್ರಸ್ತುತ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಗೆ ಹೂವು, ಹಣ್ಣು, ತರಕಾರಿ ಸೇರಿದಂತೆ ವಿವಿಧ ಬೆಳೆಗಳು ಶೇ.40 ರಷ್ಟು ಹಾಳಾಗಿವೆ ಎಂಬ ಮಾಹಿತಿಯು ಲಭ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net