ಗುಡಿಬಂಡೆ: ತಾಲೂಕಿನ ದಪ್ಪರ್ತಿ ಗ್ರಾಪಂ ವ್ಯಾಪ್ತಿಯ ಗವಿಕುಂಟಹಳ್ಳಿಯ ರೈತ ನಾಗರಾಜ ಸಾಕಿರುವ ಮೇಕೆ ಗುರುವಾರ ಬೆಳಗ್ಗೆ ಹಂದಿಗೆ ಹೋಲುವ ಮಾದರಿಯಲ್ಲಿ ಮರಿಗೆ ಜನ್ಮ ನೀಡಿದ್ದು ಅಚ್ಚರಿ ಮೂಡಿಸಿದೆ. ಮೇಕೆ ಮರಿ ಹಂದಿಗೆ ಹೋಲಿಕೆ ಆಗುವಂತಿದೆ, ಕೆಲವರು ನಾಯಿಯಂತಿದೆಂದು ಹೇಳುತ್ತಿದ್ದು ಇದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳಿಂದ ತಂಡೋಪತಂಡವಾಗಿ ಜನ ಆಗಮಿಸಿದ್ದರು. ಈ ಮರಿ ಹುಟ್ಟಿದ ಕೆಲ ಸಮಯದಲ್ಲೇ ಮೃತಪಟ್ಟಿದೆ.