ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ನೀಡಲಿ

ಚಿಂತಾಮಣಿಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಓರಿಯಂಟೇಷನ್​ನಲ್ಲಿ ಪ್ರಾಚಾಯೆರ್ ಡಾ.ಪಿ.ಎನ್​.ದಕ್ಷಾಯಣಿ, ಐಕ್ಯೂಎಸಿ ಕೋ&ಆರ್ಡಿನೇಟರ್​ ಡಾ.ಅರವಿಂದರೆಡ್ಡಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಂ.ತಿಮ್ಮರಾಯಪ್ಪ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಚ್​.ಆರ್​.ಶಿವಕುಮಾರ್​, ಪ್ರೊ.ಕೆ.ವಿ.ಮಂಜುನಾಥ್​ ಇದ್ದರು.

Published on

ಚಿಂತಾಮಣಿ :

ಪದವಿ ಶಿಕ್ಷಣದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳು ಯಾವುದೇ ಅನ್ಯ ಮಾರ್ಗಗಳತ್ತ ಮನಸನ್ನು ಹಾಯಿಸದೆ ವಿದ್ಯಾಭ್ಯಾಸದ ಕಡೆಗಷ್ಟೇ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಚಾಯೆರ್ ಡಾ.ಪಿ.ಎನ್​.ದಕ್ಷಾಯಣಿ ಸೂಚಿಸಿದರು.

ಸರ್ಕಾರಿ ಮಹಿಳಾ ಕಾಲೇಜಿನ ಐಕ್ಯೂಎಸಿ ಘಟಕದಿಂದ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಓರಿಯಂಟೇಷನ್​ನಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಸೌಲಭ್ಯಗಳನ್ನು ಲಭ್ಯವಿದೆ. ಆದರೆ, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ರ್ನಿಲಕ್ಷ$್ಯ ತೋರುತ್ತಿದ್ದಾರೆ.
ಉತ್ತಮ ಭವಿಷ್ಯವನ್ನು ರೂಢಿಸಿಕೊಳ್ಳುವ ಉದ್ದೇಶದಿಂದ ಪದವಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಗೆ ತಕ್ಕಂತೆ ನಾವು ನಮ್ಮನ್ನು ತೊಡಗಿಸಿಕೊಳ್ಳದಿದ್ದಲ್ಲಿ ಜೀವನದಲ್ಲಿ ಹಿಂದೆ ಉಳಿಯುತ್ತೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net