ಕೆರೆ, ಕಲ್ಯಾಣಿಯಲ್ಲಿ ಮೀನುಗಳ ಸಾವು, ಜನರಲ್ಲಿ ಆತಂಕ

ಕೆರೆ, ಕಲ್ಯಾಣಿಯಲ್ಲಿ ಮೀನುಗಳ ಸಾವು,
ಕೆರೆ, ಕಲ್ಯಾಣಿಯಲ್ಲಿ ಮೀನುಗಳ ಸಾವು,
Published on

ಚಿಕ್ಕಬಳ್ಳಾಪುರ; ಇಲ್ಲಿನ ವಿವಿಧ ಜಲಮೂಲಗಳಲ್ಲಿ ಸಾಮೂಹಿಕವಾಗಿ ಮೀನುಗಳು ಮೃತಪಟ್ಟಿರುವುದು ಆತಂಕಮೂಡಿಸಿವೆ.

ಮೊದಲು ಎಚ್.ಎನ್.ವ್ಯಾಲಿ ಯೋಜನೆಯ ತ್ಯಾಜ್ಯ ಸಂಸ್ಕರಿತ ಪೂರೈಕೆಯ ನಗರದ ಕಂದವಾರ ಕೆರೆಯಲ್ಲಿ ಮೀನುಗಳು ಮೃತಪಟ್ಟಿದ್ದು ಸ್ಥಳೀಯರು ಆತಂಕದ ಜತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಕಂದವಾರ ಕೆರೆಯ ನೀರು ಕಂದು ಬಣ್ಣಕ್ಕೆ ಪರಿವರ್ತನೆಯಾಗಿದ್ದು ದುರ್ವಾಸನೆ ಹರಡುತ್ತಿರುತ್ತದೆ. ವ್ಯಾಪಕವಾಗಿ ಜೊಂಡು ಗಿಡಗಳು ಬೆಳೆದಿವೆ. ಇನ್ನು

ಕಂದವಾರ ಕೆರೆಯ ಬಳಿಕ ನಗರದ ಭಾರತಿ ಬಡಾವಣೆಯಲ್ಲಿರುವ ಕಲ್ಯಾಣಿಯಲ್ಲಿ ಮೀನುಗಳು ಮೃತಪಟ್ಟಿವೆ. ಬೆಳಿಗ್ಗೆ ನೀರಿನಲ್ಲಿ ಮೀನುಗಳು ತೇಲುತ್ತಿರುವುದನ್ನು ಕಂಡು ಸ್ಥಳೀಯರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಕಲ್ಯಾಣಿಯಿಂದ ಸತ್ತು ಹೋಗಿದ್ದ ಮೀನುಗಳನ್ನು ತೆರವುಗೊಳಿಸಿದ್ದಾರೆ.

ಪ್ರಸ್ತುತ ಕಂದವಾರ ಕೆರೆಗೆ ಎರಡು ಹಂತದಲ್ಲಿ ಶುದ್ದೀಕರಿಸಿದ ಎಚ್.ಎನ್.ವ್ಯಾಲಿಯ ನೀರು ಪೂರೈಕೆಯಾಗುತ್ತಿದೆ. ಇದರ ಗುಣಮಟ್ಟದ ಬಗ್ಗೆ ನೀರಾವರಿ ಹೋರಾಟಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನೀರಿನಲ್ಲಿ ಮಾರಕ ಲವಣಾಂಶಗಳು, ವಿಷಕಾರಿ ಅಂಶಗಳು ಇವೆ. ಇದರಿಂದ ಅಂತರ್ಜಲ ಮಟ್ಟ ಕಲುಷಿತಗೊಳ್ಳುತ್ತಿದೆ. ಇದರ ನಡುವ ನಗರದಲ್ಲಿನ ಚರಂಡಿಯ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net