ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯ ನಾಯಿಗಳ ನಿರ್ವಹಣೆ, ಸಾರ್ವಜನಿಕರ ದೂರು, ಸಮಸ್ಯೆ, ನಿಯಮ ಉಲ್ಲಂಘನೆಯ ಅಹವಾಲು ಸ್ವೀಕರಿಸಲು ಸಹಾಯವಾಣಿ ಕೇಂದ್ರ ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೂ ಬೀದಿನಾಯಿಗಳ ಹಾವಳಿ ಕಡೆಗಣಿಸಿದ್ದು ದಾಳಿ, ಕಡಿತದ ಪ್ರಕರಣಗಳ ಬಗ್ಗೆ ಜನರು ದೂರು ಸಲ್ಲಿಸಿದಾಗ ಅಸಹಾಯಕತೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಆದರೆ, ಈಗ ನ್ಯಾಯಾಲಯದ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆ ಸ್ಥಳಿಯ ಆಡಳಿತ ಸಂಸ್ಥೆ ಪರಿಹಾರಾತ್ಮಕ ಕ್ರಮ ಕೈಗೊಳ್ಳುತ್ತಿವೆ. ಅದರಂತೆ ಸಹಾಯವಾಣಿ ಕೇಂದ್ರದ ಮೂಲಕ ಅಹವಾಲು ಆಲಿಸಿ, ಸಮಸ್ಯೆ ಬಗೆಹರಿಸಲು ಮುಂದಾಗಿವೆ.