ಬೇಸಿಗೆಗಾಲದಲ್ಲೂ ವರುಣನ ಆರ್ಭಟ, ಅಪಾರ ಪ್ರಮಾಣದ ಹಾನಿ

ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದು,
ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದು,
Published on

ಚಿಕ್ಕಬಳ್ಳಾಪುರ: ಸುಡು ಬೇಸಿಗೆಗಾಲದಲ್ಲೂ ವರುಣನ ಆರ್ಭಟ ಜೋರಾಗಿದ್ದು ಜಿಲ್ಲೆಯ ವಿವಿಧೆಡೆ ಕೃಷಿ ಬೆಳೆ, ಲಕ್ಷಾಂತರ ರೂ ಆಸ್ತಿಪಾಸ್ತಿ ನಾಶವಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ಬಾಗೇಪಲ್ಲಿ ಪಟ್ಟಣದಲ್ಲಿನ ಖಾಸಗಿ ಜಮೀನಿನಲ್ಲಿ ಅಳವಡಿಸಲಾಗಿದ್ದ ಬೃಹತ್ ಪ್ರಮಾಣದ ಟೊಮ್ಯಾಟೋ ಮಂಡಿಗಳ ಚಾವಣಿ ಕುಸಿದು ಬಿದ್ದಿದೆ. ಗಾಳಿ ಮಳೆಯ ಆರ್ಭಟಕ್ಕೆ ಕೊಚ್ಚಿ ಹೋಗಿದ್ದು, ಮಂಡಿ ಒಳಗಡೆ ನಿಲ್ಲಿಸಲಾಗಿದ್ದ ಸರಕು ಸಾಗಾಣಿಕೆ ವಾಹನಗಳು ಜಖಂಗೊಂಡಿವೆ. ಖಾಸಗಿ ಲೇಔಟ್ನ ರಸ್ತೆ ಬದಿಯಲ್ಲಿರುವ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಇದೇ ವೇಳೆ ಮಂಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಬಾಗೇಪಲ್ಲಿ ತಾಲೂಕಿನ ಮೈನಗಾನಪಲ್ಲಿಯ ರೈತ ಶ್ರೀನಿವಾಸ್ ಜಮೀನಿನಲ್ಲಿರುವ ಎರಡು ತೆಂಗಿನ ಮರಗಳಿಗೆ ಸಿಡಿಲಿನ ಬಡಿದಿದ್ದು, ಎರಡು ಮರಗಳು ಮುರಿದು ಬಿದ್ದಿವೆ. ಬಾಗೇಪಲ್ಲಿ ಪಟ್ಟಣದ ಸುಂದರಯ್ಯ ಭವನದ ಬಳಿಯಲ್ಲಿರುವ ಬೃಹತ್ ಮರವೊಂದು ಮುರಿದು ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net