ಅಪಘಾತದಲ್ಲಿ ವೃದ್ಧನಿಗೆ ಗಾಯ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಚಿಂತಾಮಣಿ: ಬೈಕ್​ಗೆ ಬೊಲೆರೋ ಡಿಕ್ಕಿಯಾಗಿ ಜಂಗಮಶೀಗೆಹಳ್ಳಿಯ ಮುನಿಯಪ್ಪ (65 ) ಗಂಭೀರ ಗಾಯಗೊಂಡಿದ್ದಾರೆ.

ಮುನಿಯಪ್ಪ ಆ.6ರಂದು ಬೈಕ್​ನಲ್ಲಿ ಕೈವಾರ ಕ್ರಾಸ್​ಗೆ ಹೋಗಿ ವಾಪಸ್​ ಗ್ರಾಮಕ್ಕೆ ಬರುತ್ತಿದ್ದಾಗ ಕೈಗಾರಿಕಾ ಪ್ರದೇಶದ ತಿರುವಿನಲ್ಲಿ ಚಿಂತಾಮಣಿ ಕಡೆಯಿಂದ ಅತಿವೇಗವಾಗಿ ಬಂದ ಬೊಲೆರೋ ಬೈಕ್​ಗೆ ಡಿಕ್ಕಿಯಾಗಿದೆ.

ಮುನಿಯಪ್ಪ ಅವರ ಬಲ ಕಾಲು ಹಾಗೂ ತಲೆಗೆ ಗಾಯಗಳಾಗಿವೆ. ಸ್ಥಳಿಯರು ಎಚ್​.ಕ್ರಾಸ್​ ಗ್ರಾಮದ ಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net