ಅಭಿವೃದ್ಧಿ ಅಧಿಕಾರಿ ಎಸ್.ಪಿ.ವಿಜಯ್ ಕುಮಾರ್ ಮಾತನಾಡಿ, ಆಯ್ಕೆಯಾದ ಫಲಾನುಭವಿಗಳಿಗೆ 20*30 ಅಳತೆಯ ನಿವೇಶನ ನೀಡಲಾಗುವುದು. ಹಕ್ಕು ಪತ್ರ ನೀಡಿದ ಬಳಿಕ ಫಲಾನುಭವಿಗಳು ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಮನೆ ನಿರ್ಮಿಸಿಕೊಳ್ಳಬಹುದು. ಮೇ 31ರವರೆಗೆ ನಿವೇಶನಕ್ಕೆ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ ಎಂದರು.ಬಿ.ಬೊಮ್ಮಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ವೆಂಕಟಾಪುರ, ಚೀಲಂನಹಳ್ಳಿ ಗ್ರಾಮದ 35 ನೀವೇಶನ ರಹಿತ ಫಲಾನುಭವಿಗಳ ಆಯ್ಕೆ ಮಾಡಲಾಯಿತು.