ಪತ್ತೆಯಾದ ಕಾಯಿಲೆಗಳು, ಲಸಿಕಾಕರಣ ಮತ್ತಷ್ಟು ಚುರುಕು

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜನವರಿಯಿಂದ ಇಲ್ಲಿಯವರೆಗೆ 26 ದಡಾರ

ಪ್ರಕರಣಗಳು, 1 ರುಬೆಲ್ಲ ಪ್ರಕರಣ ಪತ್ತೆಯಾಗಿದೆ.ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತವು, ಕಾಯಿಲೆ ನಿಮೂರ್ಲನೆಗೆ ಲಸಿಕಾಕರಣವನ್ನುಮತ್ತಷ್ಟು ಚುರುಕುಗೊಳಿಸಲು ಮುಂದಾಗಿದೆ.

ಜನವರಿಯಿಂದ ಇಲ್ಲಿಯವರೆಗೆ ದಡಾರ ಮತ್ತು ರುಬೆಲ್ಲಾ ಸಂಶಯಾಸ್ಪದ 205 ಪ್ರಕರಣಗಳಲ್ಲಿ ಮಾದರಿ ರಕ್ತ ಪರೀಕ್ಷೆ ನಡೆಸಲಾಗಿದೆ.ಈ ಪೈಕಿ ೨೬ ಪ್ರಕರಣಗಳಲ್ಲಿ ಕಾಯಿಲೆ ದೃಢಪಟ್ಟಿವೆ.ಮಂಚೇನಹಳ್ಳಿ ಭಾಗದಲ್ಲಿಯೇ 10 ಪ್ರಕರಣಗಳು ಕಂಡುಬಂದಿವೆ. ಶಿಡ್ಲಘಟ್ಟ ಮತ್ತು ಮಂಚೇನಹಳ್ಳಿ ನಗರಪ್ರದೇಶ ವ್ಯಾಪ್ತಿಯಲ್ಲಿ ಲಸಿಕಾಕರಣವು ಸಮರ್ಪಕವಾಗಿನಡೆಯದಿರುವುದು ಗೊತ್ತಾಗಿದೆ.

ಇಲ್ಲಿನ ಜಿ.ಪಂ.ಕಚೇರಿಯ ಸಭಾಂಗಣದಲ್ಲಿಕೈಗೊಂಡಿದ್ದ ಲಸಿಕಾಕರಣ ಪ್ರಗತಿ ಪರಿಶೀಲನಾಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆಈ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ.

ಪೊಲೀಯೋ ಲಸಿಕೆ, ಇಂದ್ರ ಧನುಷ್ ಲಸಿಕೆ ಸೇರಿದಂತೆ ವಿವಿಧಲಸಿಕಾಕರಣದಲ್ಲಿ ಪೂರ್ಣ ಗುರಿ ಸಾಧನೆಯಾಗಬೇಕು. ಮಕ್ಕಳಿಗೆ ಲಸಿಕೆಹಾಕಿದ ಬಳಿಕ ಪರಿಶೀಲಿಸಿ, ದೃಢೀಕರಣ ಪತ್ರವನ್ನುನೀಡಬೇಕು. ಆಸ್ಪತ್ರೆಯಿಂದ ಕಳುಹಿಸುವಾಗತಾಯಿ ಕಾರ್ಡ್ ಹಾಗೂ ಬಿಡುಗಡೆಯ ಪ್ರಮಾಣದಲ್ಲಿಲಸಿಕಾಕರಣದ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಇದರ ಬಗ್ಗೆ ಆಯಾ ವ್ಯಾಪ್ತಿಯ ತಾಲೂಕು ಆರೋಗ್ಯಾಧಿಕಾರಿಗಳುದೃಢೀಕರಿಸಬೇಕು. ಇದರ ಬಗೆಗಿನ ಖಾತ್ರಿಯ ವರದಿ ಸಲ್ಲಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net