ಗೌರಿಬಿದನೂರು&ಮಂಚೇನಹಳ್ಳಿ ತಾಲೂಕಿನ ಆರ್ಕುಂದ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಪೂರ್ಣಿಮಾ ಅವರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಬಿ.ವಿ. ಲೋಕೇಶ್ ಗೌಡ, ಮುಖಂಡರಾದ ಮುದ್ದು ರಂಗಪ್ಪ, ರಾಜಣ್ಣ, ಆದಿನಾರಾಯಣಪ್ಪ, ಸರವಣ್, ಗಣೇಶ್, ಗೋವಿಂದಪ್ಪ ರಾಜಣ್ಣ, ವೆಂಕಟೇಶ್ ನಾರಾಯಣಪ್ಪ, ಬಾಬು ಇದ್ದರು.
ಮಂಚೇನಹಳ್ಳಿ ತಾಲೂಕಿನ ಆರ್ಕುಂದ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಬಿ.ವಿ.ಲೋಕೇಶ್ ಗೌಡ ನೇತೃತ್ವದಲ್ಲಿ ರೈತ ಮುಖಂಡರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಸ್ಫೋಟದ ಶಬ್ದಕ್ಕೆ ಸ್ಥಳಿಯ ಅರಣ್ಯ, ಬೆಟ್ಟದಲ್ಲಿರುವ ಕಾಡು ಪ್ರಾಣಿಗಳು ಕೃಷಿ ಜಮೀನುಗಳತ್ತ ಬರುತ್ತಿವೆ. ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಈಗಾಗಲೇ 2 ಚಿರತೆ ಕಾಣಿಸಿಕೊಂಡಿದ್ದು, ಕುರಿ, ಹಸುಗಳನ್ನು ತಿಂದಿವೆ. ಹಾಗಾಗಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು. ಸಾಕು ಪ್ರಾಣಿ ಕಳೆದುಕೊಂಡು ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ವಿತರಿಸಲು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಪೂರ್ಣಿಮಾ ಅವರು ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.