ಹಾಡಹಗಲೇ ಗ್ಯಾಸ್ ರೀ ಫಿಲ್ಲಿಂಗ್ ದಂಧೆ, ಮಾಲು ಸಮೇತ ದಂಧೆಕೋರನ ಬಂಧನ

ದಂಧೆಯ ಸ್ಥಳದಲ್ಲಿ ಬಳಸುತ್ತಿದ್ದ ಅಡುಗೆ ಅನಿಲ‌ ಸಿಲಿಂಡರ್ ಗಳು.
ದಂಧೆಯ ಸ್ಥಳದಲ್ಲಿ ಬಳಸುತ್ತಿದ್ದ ಅಡುಗೆ ಅನಿಲ‌ ಸಿಲಿಂಡರ್ ಗಳು.
Published on

ಚಿಕ್ಕಬಳ್ಳಾಪುರ: ಅನಾಹುತಕಾರಿ ಎಂಬುದರ ಅರಿವಿನ ನಡುವೆಯೂ ಅಡುಗೆ ಅನಿಲ ಸಿಲಿಂಡರ್ ಗಳ ಅಕ್ರಮ ರೀ ಫಿಲ್ಲಿಂಗ್ ದಂಧೆ ಮಾತ್ರ ನಿಲ್ಲುತ್ತಿಲ್ಲ. ಹಣದಾಸೆಗಾಗಿ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುವಂತಹ ಧೋರಣೆಯನ್ನು ದಂಧೆಕೋರರು ಪ್ರದರ್ಶಿಸುತ್ತಿದ್ದಾರೆ. ಇಂತಹ ದೂರಿನ ನಡುವೆ ಶಿಡ್ಲಘಟ್ಟದಲ್ಲಿ ಪೊಲೀಸರು ದಂಧೆಯನ್ನು ಪತ್ತೆ ಹಚ್ಚಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಇಲ್ಲಿನ ಆಂಜನಿ ಬಡಾವಣೆಯ ಗೋಪಾಲ್ (43) ಆರೋಪಿ. ದಂಧೆಗೆ ಬಳಸುತ್ತಿದ್ದ ಇಂಡೆನ್ ಕಂಪನಿಯ ಅಡುಗೆ ಅನಿಲದ ಖಾಲಿ 4 ಸಿಲಿಂಡರ್, 16 ಅಡುಗೆ ಅನಿಲ ತುಂಬಿದ ಸಿಲಿಂಡರ್, ಭಾರತ್ ಕಂಪನಿಯ 4 ಸಿಲಿಂಡರ್, 1 ತೂಕದ ಯಂತ್ರ, 1 ಗ್ಯಾಸ್ ಫಿಲ್ಲಿಂಗ್ ಮೋಟಾರು, 1 ಗ್ಯಾಸ್ ಕನೆಕ್ಟಿಂಗ್ ಪೈಪ್, 2 ಚಿಕ್ಕ ಖಾಲಿ ಸಿಲಿಂಡರ್, 1 ಆಟೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

*ನಗರದಲ್ಲಿ ಹಾಡಹಗಲೇ ದಂಧೆ*
ಶಿಡ್ಲಘಟ್ಟ ನಗರದಲ್ಲಿನ ಗೋಪಾಲ್ ಸೇರಿದ
ಆಟೋ ಮೊಬೈಲ್ ಅಂಗಡಿಯಲ್ಲಿ ಹಾಡಹಗಲೇ ರಾಜಾರೋಷವಾಗಿ ದಂಧೆ ನಡೆಯುತ್ತಿತ್ತು. ಸುರಕ್ಷತೆ ನಿಯಮಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಅಡುಗೆ ಅನಿಲ ಸಿಲಿಂಡರ್ ತರಿಸಿಕೊಂಡು ಚಿಕ್ಕ ಚಿಕ್ಕ ಸಿಲಿಂಡರ್ ಗಳಿಗೆ ಅನಿಲವನ್ನು ತುಂಬಲಾಗುತ್ತಿತ್ತು. ಇದನ್ನು ಆಟೋ ವಾಹನಗಳಿಗೆ ಮಾರಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪೊಲೀಸರು ದಂಧೆ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net