ಬೇಸಿಗೆಯಲ್ಲಿ ಸುರಿದ ಮಳೆಗೆ ಕೂಲ್‌, ತಪ್ಪದ ಜನರ ಪರದಾಟ

ಚಿಕ್ಕಬಳ್ಳಾಪುರದಲ್ಲಿ ಮಳೆ ಸುರಿಯುತ್ತಿರುವ ದೃಶ್ಯ
ಚಿಕ್ಕಬಳ್ಳಾಪುರದಲ್ಲಿ ಮಳೆ ಸುರಿಯುತ್ತಿರುವ ದೃಶ್ಯ
Published on

ಚಿಕ್ಕಬಳ್ಳಾಪುರ: ಸುಡು ಬೇಸಿಗೆಯ ವಾತಾವರಣದನಡುವೆ ವಿವಿಧೆಡೆ ಜೋರು ಗುಡುಗು, ಬಿರುಗಾಳಿ ಸಮೇತ ಮಳೆ ಬಿದ್ದಿದ್ದು ಅಲ್ಲಲ್ಲಿ ಅವಾಂತರಗಳು ಸೃಷ್ಟಿಯಾಗಿವೆ.

ಬೇಸಿಗೆಯ ಅವಧಿ ಪ್ರಾರಂಭದಲ್ಲಿ ಮೊದಲ ಮಳೆಯ ವೇಳೆಜೋರು ಗಾಳಿಗೆ ಪೋಶೆಟ್ಟಹಳ್ಳಿ, ಮಂಚೇನಹಳ್ಳಿ ಭಾಗದಲ್ಲಿವಿದ್ಯುತ್‌ ತಂತಿಗಳು ಕಡಿದು ರಸ್ತೆಗೆ ಬಿದ್ದಿದೆ. ವಾಟದಹೊಸಹಳ್ಳಿ ಹೊರ ವಲಯದಲ್ಲಿ ಆಲಿಕಲ್ಲುಸಮೇತ ಮಳೆಯಾಗಿದೆ.

ಜಿಲ್ಲಾದ್ಯಂತ ಮೋಡ ಕವಿದ ತಂಪು ವಾತಾವರಣ ಇತ್ತು.ರಾತ್ರಿ ಗುಡುಗಿನ ಆರ್ಭಟ ಜೋರಾಗಿತ್ತು. ಇದರ ನಾಲ್ಕೈದು ಬಾರಿ ಸದ್ದಿಗೆ ಜನ ಬೆಚ್ಚಿ ಬಿದ್ದಿದ್ದುಮಿಂಚಿನ ಸಂದರ್ಭದಲ್ಲಿ ಹೊರಗಡೆ ಓಡಾಡಲು ಜನರು ಹಿಂದೇಟು ಹಾಕಿದರು.

ಜಿಲ್ಲೆಯ ಬಾಗೇಪಲ್ಲಿ ಹಾಗೂ ಗೌರಿಬಿದನೂರುಭಾಗದಲ್ಲಿ ತುಂತುರು ಹನಿಗಳ ಸಿಂಚನವಾಗಿದೆ. ಗುಡಿಬಂಡೆ ಹಾಗೂ ಶಿಡ್ಲಘಟ್ಟದಲ್ಲಿ ಜೋರು ಗುಡುಗುಸಿಡಿಲು ಮಾತ್ರ ಕಂಡು ಬಂದಿದ್ದು ಮಳೆಯಾಗಲಿಲ್ಲ. ಇನ್ನು ಚಿಕ್ಕಬಳ್ಳಾಪುರದಲ್ಲಿ 15 ನಿಮಿಷ ಮಳೆಸುರಿದಿದೆ. ಜೋರು ಗಾಳಿ ಹಾಗೂ ಮಳೆಯ ಹಿನ್ನೆಲೆಯಲ್ಲಿ ಹಲವು ತಾಸು ವಿದ್ಯುತ್‌ವ್ಯತ್ಯಯವಾಗಿ, ಕಗ್ಗತ್ತಲಿನ ವಾತಾವರಣ ನಿರ್ಮಾಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net