ಚಿಂತಾಮಣಿ: ಲೀವಿಂಗ್ ಟುಗೆದರ್ ರಿಲೇಶನ್ ಶಿಪ್ನಲ್ಲಿದ್ದ ಪ್ರಿಯಕರನೊಬ್ಬ ಮಾಜಿ ಪ್ರೇಯಸಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರಿಂದ ಆಕ್ರೋಶಗೊಂಡ ಯುವತಿ ಸಂಬಂಧಿಕರು ಗೂಸಾ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 19 ಮಂದಿ ವಿರುದ್ಧ ದೂರು ದಾಖಲಾಗಿದೆ. ಹಲ್ಲೆಗೊಳಗಾದ ನಲ್ಲಗುಟ್ಟಹಳ್ಳಿ ಆನಂದ್ ವಿವಾಹಿತನಾಗಿದ್ದರೂಕಟಮಾಚನಹಳ್ಳಿ ಯುವತಿಯೊಂದಿಗೆ ಲೀವಿಂಗ್ ಟುಗೆದರ್ ರಿಲೇಶನ್ ಶಿಪ್ನಲ್ಲಿದ್ದು ಇತ್ತೀಚೆಗೆ ಬೇರೆಯಾಗಿದ್ದರು. ಬ್ರೇಕಪ್ ಮಾಡಿಕೊಂಡ ಯುವತಿಗೆ ಬೇರೊಬ್ಬರೊಂದಿಗೆ ವಿವಾಹವಾಗಿದೆ. ವಿವಾಹದ ನಂತರವೂ ಆನಂದ್ ಆಕೆಯ ಹಿಂದೆ ಬಿದ್ದಿದ್ದಲ್ಲದೆ ಹಿಂದೆ ಒಟ್ಟಿಗೆ ಇರುವ ೋಟೋಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇದರಿಂದ ಕೋಪಗೊಂಡ ಯುವತಿಯ ಸಂಬಂಧಿಕರು ಕಟಮಾಚನಹಳ್ಳಿ ಬಳಿ ಸಿಕ್ಕಿದ ಆನಂದ್ಗೆ ಥಳಿಸಿದ್ದರು. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆನಂದ್, ನಗರದ ಅಶ್ವಿನಿ ಬಡಾವಣೆಯಲ್ಲಿರುವ ಯುವತಿ 2 ವರ್ಷಗಳ ಹಿಂದೆ ಪರಿಚಯವಾಗಿದ್ದು ಪ್ಯಾರಾ ಮೆಡಿಕಲ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು. ನನಗೆ ಕಾಲ್, ಮೆಸೇಜ್, ಫೋಟೋ ಕಳಿಸಿ ನನ್ನನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ನಂಬಿಸಿ ವಂಚಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಆಂಧ್ರಪ್ರದೇಶ, ಲೇಪಾಕ್ಷಿ, ಹಿಂದುಪುರ ಇನ್ನೂ ಮುಂತಾದ ಕಡೆಗಳ ರ್ನಿಜನ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ನನ್ನ ಹತ್ತಿರ 12 ಲಕ್ಷ ರೂ. ಡಿಡಿ, ಫೋನ್ ಪೇ ಮುಖಾಂತರ ಹಣ ಲಪಟಾಯಿಸಿರುತ್ತಾಳೆ. 8 ಲಕ್ಷ ರೂ.ನಗದು ಪಡೆದಿದ್ದಾಳೆ ಎಂದು ದೂರಿದರು. ನಂತರ 2024 ಜೂ.4 ರಂದು ಯುವತಿ ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್ಗೆ ಹೋಗಿ ಬರುವಾಗ ಚಿಂತಾಮಣಿ ರಸ್ತೆಯ ಕೋನಪ್ಪಲಿ ಗೇಟ್ ಬಳಿ ಕಾರು ನಿಲ್ಲಿಸಿ ಟೀ ಕುಡಿದು ಬರುವಷ್ಟರಲ್ಲಿ ಕಾರಿನಲ್ಲಿದ್ದ 39,000 ರೂ.ಎಗರಿಸಿದ್ದಾಳೆ, ಹಲವಾರು ಬಾರಿ ನನಗೆ ಬೆದರಿಸಿ ಲಾಂತರ ರೂ. ವಸೂಲಿ ಮಾಡಿದ್ದಾರೆ ಎಂದರು.