ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಗಲಾಟೆ, ಆರೋಪಿಗಳಿಗೆ ಜಾಮೀನು

ಕಾರ್ಯಕ್ರಮದಲ್ಲಿ ಗಲಾಟೆಯ ದೃಶ್ಯ
ಕಾರ್ಯಕ್ರಮದಲ್ಲಿ ಗಲಾಟೆಯ ದೃಶ್ಯ
Published on

ಚಿಕ್ಕಬಳ್ಳಾಪುರ: ನಗರದ ಕನ್ನಡ ಭವನದಲ್ಲಿಕೈಗೊಂಡಿದ್ದ ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗಲಾಟೆ, ಶಾಸಕ ಪ್ರದೀಪ್‌ ಈಶ್ವರ್ ರತ್ತ ಚಪ್ಪಲಿತೂರಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ೮ ಜನ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯವು ಜಾಮೀನುನೀಡಿದೆ.

ಘಟನೆಗೆ ಸಂಬಂಧಿಸಿದಂತೆಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ನಗರ ಠಾಣೆಯ ಪೊಲೀಸರು ತಾಲೂಕಿನ ಅಂದಾರ್ಲಹಳ್ಳಿಯಮೋಹನ್‌ ರಾಜ್‌, ಜೀಡಮಾಕಲಹಳ್ಳಿಯ ಅಖಿಲ್‌ ರೆಡ್ಡಿ, ತಾಳಹಳ್ಳಿಯ ಮಹೇಂದ್ರ ಹಾಗೂ ಶಾಸಕರ ಮೇಲೆ ಶೂಎಸೆದ ಅಡವಿಗೊಲ್ಲವಾರಹಳ್ಳಿಯ ಪ್ರಕಾಶ್‌ ಸೇರಿದಂತೆ ೮ ಜನರನ್ನು ಪ್ರಕರಣಕ್ಕೆ ಪೊಲೀಸರುಬಂಧಿಸಿದ್ದರು. ಆರೋಪಿಗಳು ನ್ಯಾಯಾಂಗ ಬಂಧನದಡಿ ತಾಲೂಕಿನ ಅಣಕನೂರು ಗ್ರಾಮದ ಸಮೀಪದ ಜಿಲ್ಲಾಕಾರಾಗೃಹದಲ್ಲಿದ್ದರು. ಇವರು ಸಲ್ಲಿಕೆಯ ಅರ್ಜಿಯನ್ನು ಪರಿಗಣಿಸಿದ ಜಿಲ್ಲಾ ನ್ಯಾಯಾಲಯವು ಜಾಮೀನುಮಂಜೂರು ಮಾಡಿದೆ. ಇದರಿಂದ ಬಂಧಿತರು ಬಿಡುಗಡೆಗೊಂಡಿದ್ದಾರೆ.

ಇತ್ತೀಚೆಗೆ ರಾಜ್ಯಜೆಡಿಎಸ್‌ ಯುವ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಜೈಲಿನಲ್ಲಿ ಆರೋಪಿಗಳನ್ನು ಭೇಟಿ ಮಾಡಿ, ಧೈರ್ಯತುಂಬಿದ್ದರು. ಹಾಗೆಯೇ ಬಂಧಿತರ ಪರ ವಾದಿಸಲು ವಕೀಲರನ್ನು ಬಿಜೆಪಿ ಹಾಗೂ ಜೆಡಿಎಸ್ನಿಯೋಜಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net