ಸುಜ್ಞಾನಂಪಲ್ಲಿ ಶಾಲೆ ಆವರಣ ಸ್ವಚ್ಛಗೊಳಿಸಿ

ಬಾಗೇಪಲ್ಲಿ ತಾಲೂಕಿನ ಸುಜ್ಞಾನಂಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ಬೆಳೆದಿರುವ ಗಿಡ&ಗಂಟಿ.
ಬಾಗೇಪಲ್ಲಿ ತಾಲೂಕಿನ ಸುಜ್ಞಾನಂಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ಬೆಳೆದಿರುವ ಗಿಡ&ಗಂಟಿ.
Published on

ಪ್ರಮುಖ ಮುಖ್ಯಾಂಶಗಳು

  • ವಿಷ ಜಂತುಗಳಿಂದ ಕಾಪಾಡಿ
ವಿಜಯವಾಣಿ ಸುದ್ದಿಜಾಲ ಪಾತಪಾಳ್ಯ
ಸುಜ್ಞಾನಂಪಲ್ಲಿ (ಕಳ್ಳಿಪಲ್ಲಿ) ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳೆದಿರುವ ಗಿಡ&ಗಂಟಿಗಳಲ್ಲಿ ವಾಸವಾಗಿರುವ ವಿಷ ಜಂತುಗಳನ್ನು ಕಂಡ ಮಕ್ಕಳು ಭಯಪಡುವಂತಾಗಿದೆ.
ತೋಳ್ಳಪಲ್ಲಿ ಗ್ರಾಪಂ ವ್ಯಾಪ್ತಿಯ ಸುಜ್ಞಾನಂಪಲ್ಲಿ (ಕಳ್ಳಿಪಲ್ಲಿ) ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕಟ್ಟಡವನ್ನು ಊರ ಹೊರಭಾಗದಲ್ಲಿ ನಿರ್ಮಿಸಲಾಗಿದೆ. 4 ತಿಂಗಳ ಹಿಂದೆ ಕ್ಷೇತ್ರ ಶಾಸಕರು ಕಟ್ಟಡ ಉದ್ಘಾಟಿಸಿದ್ದರು. ಪ್ರಾಥಮಿಕ ಶಾಲೆಯಲ್ಲಿ 22 ಮಕ್ಕಳು, ಅಂಗನವಾಡಿ ಕೇಂದ್ರದಲ್ಲಿ 11 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನೂತನ ಕಟ್ಟಡದ ಸುತ್ತಲೂ ಕುರುಚಲು ಗಿಡಗಳು ಬೆಳೆದಿದ್ದು ಇದರಲ್ಲಿ ವಿಷ ಜಂತುಗಳು ವಾಸವಾಗಿವೆ.
ಇತ್ತೀಚೆಗೆ ಶಾಲೆ ಆವರಣದಲ್ಲಿ ಹಾವು ಓಡಾಡುತ್ತಿರುವುದನ್ನು ಕಂಡ ವಿದ್ಯಾರ್ಥಿಗಳು ಭೀತಿಗೊಳಗಾಗಿದ್ದಾರೆ. ಪರಿಶಿಷ್ಟ ಜಾತಿಯವರೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ಇಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಶಾಲೆ ಪ್ರಗತಿಯತ್ತ ಸಾಗುತ್ತಿದೆ. ಶಾಲೆ ಆವರಣ ಸ್ವಚ್ಛಗೊಳಿಸುವುದರಿಂದ ಮಕ್ಕಳು ಆಟ ಆಡಲು ಕಷ್ಟವಾಗುತ್ತಿದೆ.
ಶಾಲೆ ಆವರಣದಲ್ಲಿ ವಿಷ ಜಂತುಗಳು ಓಡಾಡುತ್ತಿರುವುದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಮಕ್ಕಳ ಹಾಜರಾತಿ ಕಡಿಮೆ ಆಗುವ ಸಂಭವವುಂಟು. ಇದೇ ಆವರಣದ ಅಂಗನವಾಡಿ ಕೇಂದ್ರದಲ್ಲಿ ಗುತ್ತಿಗೆದಾರರು ಶೌಚಾಲಯಕ್ಕೆ ಬಾಗಿಲು ಇಡದಿದ್ದರಿಂದ ಸಾಂಕ್ರಾಮಿಕ ಹರಡುವ ಭೀತಿ ಎದುರಾಗಿದೆ. ಇದರ ಬಗ್ಗೆ ಗುತ್ತಿಗೆದಾರರನ್ನು ವಿಚಾರಿಸಿದರೆ ಶಾಲಾ ಆವರಣ ಸ್ವಚ್ಛಗೊಳಿಸಿ ಕೊಡುವುದಾಗಿ ತಿಳಿಸಿದ್ದು ಇದುವರೆಗೆ ಕ್ರಮ ಕೈಕೊಂಡಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಲೆ ಆವರಣ ಸ್ವಚ್ಛಗೊಳಿಸಲು ಕ್ರಮ ಕೈ ಗೊಳ್ಳಬೇಕು ಎಂದು ಸ್ಥಳಿಯರು ಮನವಿ ಮಾಡಿದ್ದಾರೆ.
ಸುಜ್ಞಾನಂಪಲ್ಲಿ ಹೊರಭಾಗದಲ್ಲಿ ನಿರ್ಮಿಸಿರುವ ಶಾಲಾ ಆವರಣದಲ್ಲಿ ಬೆಳೆದಿರುವ ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸಿ ಅನುವು ಮಾಡಿಕೊಟ್ಟರೆ ಮಕ್ಕಳು ಬೆಳಗಿನ ಪ್ರಾರ್ಥನೆ, ಕ್ರೀಡೆಗೆ ಅನುಕೂಲವಾಗುತ್ತದೆ.
| ಗಂಗಾಧರ ಸ್ಥಳಿಯ, ಕಳ್ಳಿಪಲ್ಲಿ
ಸುಜ್ಞಾನಂಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಗುತ್ತಿಗೆದಾರರನ್ನು ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು
| ವೆಂಕಟರವಣಪ್ಪ ಪಿಡಿಒ, ಗ್ರಾಪಂ ತೋಳ್ಳಪಲ್ಲಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net