

ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುತ್ತಿಗೆ ಹಾಕಲು ಯತ್ನಿಸಿದರೈತರು ಹಾಗೂ ಪೊಲೀಸರ ನಡುವೆ ತಳ್ಳಾಟ, ಮಾತಿನ ಚಕಮಕಿ ನಡೆಯಿತು. ಪೊಲೀಸ್‌ಸಿಬ್ಬಂದಿ ರೈತರ ಕೊರಳಪಟ್ಟಿಯನ್ನು ಹಿಡಿದುಕೊಂಡು ವಾಹನಕ್ಕೆ ಎಳೆದುಕೊಂಡು ಹೋದ, ನಿಂತಿದ್ದ ರೈತರ ಮೈ ಮೇಲೆ ನಿರ್ದಾಕ್ಷಿಣ್ಯವಾಗಿ ಬ್ಯಾರಿಕೇಡುಗಳನ್ನು ಹಾಕುತ್ತಿದ್ದ ವರ್ತನೆಯು ಆಕ್ರೋಶಕ್ಕೆಕಾರಣವಾಗಿದೆ.
ರಾಜ್ಯ ರೈತ ಸಂಘದಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗಅನಿರ್ದಿಷ್ಟಾವಧಿ ಧರಣಿ ನಡೆಸಲಾಯಿತು. ಇದೇ ವೇಳೆ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಲುಬಂದ ಸಚಿವರಿಗೆ ರೈತರು ಮುತ್ತಿಗೆ ಹಾಕಲು ಯತ್ನಿಸಿದರು. ಇದು ಮಾತಿನ ಚಕಮಕಿ, ತಳ್ಳಾಟಕ್ಕೆಕಾರಣವಾಯಿತು.
ಮುಂಜಾಗ್ರತಾ ಕ್ರಮವಾಗಿಅಳವಡಿಸಿದ್ದ ಬ್ಯಾರಿಕೇಡುಗಳನ್ನು ಕಿತ್ತು ಭವನದೊಳಗೆ ನುಗ್ಗಲು ರೈತರು ಮುಂದಾದರು. ಪೊಲೀಸರಎಚ್ಚರಿಕೆಗೆ ಕಿವಿಗೊಡಲಿಲ್ಲ. ಇದರಿಂದ ಸ್ಥಳದಲ್ಲಿದ್ದವರನ್ನು ಬಂಧಿಸಲಾಯಿತು. ಮಹಿಳೆಯರು ಎನ್ನದೇಖಾಕಿ ಪಡೆ ಎಳೆದಾಡಿತು. ಇದಕ್ಕೆ ಧಿಕ್ಕಾರದ ಘೋಷಣೆಗಳೊಂದಿಗೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹಲವು ದಿನಗಳಿಂದಲೂಶಾಂತಿಯುತವಾಗಿ ಹೋರಾಟವನ್ನು ನಡೆಸಲಾಗುತ್ತಿದೆ. ಇಲ್ಲಿಗೆ ಸಚಿವರು ಸೌಜನ್ಯಕ್ಕೂ ಭೇಟಿ ನೀಡಿ,ಸಮಸ್ಯೆ ಆಲಿಸಿಲ್ಲ. ಇದಕ್ಕೆ ಅನಿವಾರ್ಯವಾಗಿ ಮುತ್ತಿಗೆ ಹಾಕುವ, ಕಚೇರಿಗೆ ನುಗ್ಗಬೇಕಾದಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬರುವ ದಿನಗಳಲ್ಲಿ ಹೋರಾಟದ ಸ್ವರೂಪ ಮತ್ತಷ್ಟು ತೀವ್ರವಾಗಲಿದೆಎಂದು ಭೈರೇಗೌಡ ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದೆಡೆ ಜಂಗಮಕೋಟೆಹೋಬಳಿಯ ೧೩ ಹಳ್ಳಿಗಳ ವ್ಯಾಪ್ತಿಯಲ್ಲಿನ ಕೈಗಾರಿಕಾಭಿವೃದ್ಧಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆಸೌಜನ್ಯ ಇಲ್ಲದವರ ಮಾತುಕತೆ ನಡೆಸುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿಸಚಿವ ಡಾ ಎಂ.ಸಿ.ಸುಧಾಕರ್ ಕಿಡಿಕಾರಿದ್ದಾರೆ.