

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದ ಕೂಗಳತೆಯದೂರದಲ್ಲಿರುವ ೧೫೦ ಕೋಟಿ ರೂ ಮೌಲ್ಯದ ಸರ್ಕಾರಿ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ನಗರಸಭೆಯುಇ ಖಾತೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ಹೌದು, ಮೊದಲಿನಿಂದಲೂ ಅಕ್ರಮವ್ಯವಹಾರಗಳಿಗೆ ಹೆಸರುವಾಸಿಯಾಗಿರುವ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಸರ್ಕಾರಿ ದೊಡ್ಡ ಭೂ ದಂಧೆಯುವ್ಯಾಪಕ ಚರ್ಚೆಗ್ರಾಸವಾಗಿದೆ. ಸಾಮಾನ್ಯ ಜನರಿಗೆ ನಿವೇಶನದ ಇ ಖಾತೆ ಮಾಡಿಸಿಕೊಡಲು ಹಲವು ಬಾರಿಅಲೆದಾಡಿಸಿ ಲಂಚಕ್ಕೆ ಪೀಡಿಸುವ ಅಧಿಕಾರಿಗಳು ೧೫೦ ಕೋಟಿ ರೂ ಮೌಲ್ಯದ ೨೪ ಎಕರೆ ಜಮೀನಿಗೆಅಕ್ರಮವಾಗಿ ಇ ಖಾತೆ ಮಾಡಿಸಿಕೊಟ್ಟಿದ್ದಾರೆ. ಅಸಲಿಗೆ ಈ ಅಧಿಕಾರ ನಗರಸಭೆಗಿಲ್ಲ. ನಿಯಮಾನುಸಾರಇಷ್ಟೊಂದು ಪ್ರಮಾಣದ ಸರ್ಕಾರಿ ಜಮೀನು ಮಂಜೂರಾತಿಗಾಗಿ ರಾಜ್ಯ ಸರ್ಕಾರದ ಆದೇಶಬೇಕು. ಆದರೆ, ಇಲ್ಲಿರಾಜಾರೋಷವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಗರಸಭೆಯ ಹಂತದಲ್ಲಿಯೇ ಕೋಟ್ಯಂತರ ರೂ ಮೌಲ್ಯದಸರ್ಕಾರಿ ಜಮೀನು ಲಪಟಾಯಿಸಲು ಯತ್ನಿಸಲಾಗಿದೆ.
೧೦ಕೋಟಿ ಕಿಕ್ ಬ್ಯಾಕ್ ಆರೋಪ?
ನಗರಸಭೆಯ ಅಧಿಕಾರಿಗಳ ಮೇಲೆ ಒತ್ತಡಹೇರಿ, ಅಧಿಕೃತ ಲಾಗಿನ್ ಮೂಲಕ ಖಾತೆ ಸೃಜಿಸಲಾಗಿದೆ. ಇದಕ್ಕೆ ೧೦ ಕೋಟಿ ಕಿಕ್ ಬ್ಯಾಕ್‌ವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ಚಿಕ್ಕಬಳ್ಳಾಪುರ ವ್ಯಾಪ್ತಿಯ ಸರ್ಕಾರಿ ಜಂೀನಿಗೆ ಇಖಾತೆ ಸೃಜಿಸಿದ ಬಳಿಕ, ಶಿಡ್ಲಘಟ್ಟ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪರಭಾರೆ ಪ್ರಕ್ರಿಯೆಕೈಗೊಳ್ಳಲಾಗಿದೆ. ಇನ್ನು ಇ ಖಾತೆ ದಾಖಲೆಯ ಪ್ರಕಾರ ೨೦೨೭-೦೪-೦೮ ರಂದು ೮,೨೪,೦೮೭ ರೂ ತೆರಿಗೆಪಾವತಿಸಿದೆ ಎಂಬ ಮಾಹಿತಿ ಇದ್ದು ಭವಿಷ್ಯದ ದಿನಾಂಕದ ತೆರಿಗೆ ರಸೀಧಿಯು ಗೋಲ್ ಮಾಲ್ ಗೆಸಾಕ್ಷಿಯಾಗಿದೆ.
ಸಾಮಾಜಿಕಕಾರ್ಯಕರ್ತನ ಹೋರಾಟ
ನಗರಸಭೆಯು ಈ ಕೈ ಚಳಕಕ್ಕೆ ಸಂಬಂಧಿಸಿದಂತೆಸೂಕ್ತ ದಾಖಲೆಗಳೊಂದಿಗೆ ಸಾಮಾಜಿಕ ಕಾರ್ಯಕರ್ತ ಹಾಗೂ ನಗರಸಭಾ ಮಾಜಿ ಸದಸ್ಯ ಅಮೀರ್ ಮಹಮದ್‌ಸಾಧಿಕ್ ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ.
ಸರ್ಕಾರಿ ಆಸ್ತಿಯನ್ನು ಕೊಳ್ಳೆ ಹೊಡೆದುಖಾಸಗಿಯವರಿಗೆ ಪರಭಾರೆ ಮಾಡಲು ಹೊರಟಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಕೂಡಲೇ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಅಮಾನತ್ ಗೊಳಿಸಬೇಕು. ಇಲ್ಲದಿದ್ದಲ್ಲಿ ನ್ಯಾಯಾಲಯದಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.