ಇಲ್ಲಿನ ಗೊಲ್ಲರದೊಡ್ಡಿ ನಾರಾಯಣಸ್ವಾಮಿ ಹಾಗೂ ಮಧು ದಂಪತಿಯ ಪುತ್ರಿ ಗಗನ ಸಿಂಧು(೪ ವರ್ಷ ) ಗಾಯಾಳು. ಚಿಕ್ಕಬಳ್ಳಾಪುರದ ಅಂಗಡಿಗೆ ಬಟ್ಟೆ ಖರೀದಿಸಲು ಇಬ್ಬರು ಮಕ್ಕಳೊಂದಿಗೆ ದಂಪತಿ ಬಂದಿದ್ದರು. ಒಳಗೆ ತಾಯಿಯೊಂದಿಗೆ ನಿಂತುಕೊಂಡಿದ್ದ ಮಗು ಆಕಸ್ಮಿಕವಾಗಿ ಹೊರಗೆ ಬಂದಿತ್ತು. ಅಂಗಡಿಯ ಮೆಟ್ಟಿಲು ಗ್ರಿಲ್ ಹತ್ತಿ, ಕೆಳಗೆ ನೋಡಲು ಯತ್ನಿಸಿದೆ. ಇದೇ ವೇಳೆ ತಲೆ ಕೆಳಗಾಗಿ ಮೊದಲ ಅಂತಸ್ತಿನ ಕಟ್ಟಡದಿಂದ ನೆಲಕ್ಕೆ ಬಿದ್ದಿತ್ತು. ತಲೆ, ಬೆನ್ನಿಗೆ ಗಂಭೀರವಾಗಿತ್ತು. ತಕ್ಷಣ ತಂದೆ ತಾಯಿ ಮಗುವನ್ನು ಎತ್ತಿಕೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆ ಚಿಕಿತ್ಸೆ ಕೊಡಿಸಿದ್ದು ಇದೀಗ ಚೇತರಿಸಿಕೊಂಡಿರುವ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.