

ಚಿಕ್ಕಬಳ್ಳಾಪುರ: ಎಚ್.ಎನ್.ವ್ಯಾಲಿ ನೀರಿನ ೩ ನೇ ಹಂತದ ಶುದ್ಧೀಕರಣಕ್ಕೆಒತ್ತಾಯವನ್ನು ಕಡೆಗಣಿಸಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಮಾ.೧೫ ರಂದು ಕರೆ ನೀಡಿರುವಚಿಕ್ಕಬಳ್ಳಾಪುರ ಬಂದ್ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಭಗತ್ ಸಿಂಗ್ ಚಾರಿಟೆಬಲ್‌ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ.ರೆಡ್ಡಿ ರಾಜ್ಯ ಬಜೆಟ್ ನಲ್ಲಿ ವ್ಯಾಲಿ ನೀರಿನ ಮೂರನೇ ಹಂತದಶುದ್ದೀಕರಣಕ್ಕೆ ಹಣ ಮೀಸಲಿರಿಸದಿದ್ದಲ್ಲಿ ಹೋರಾಟದ ಎಚ್ಚರಿಕೆಯನ್ನು ನೀಡಿದ್ದರು. ಅದರಂತೆ ಮಾ.೧೫ರಂದು ಚಿಕ್ಕಬಳ್ಳಾಪುರ ಬಂದ್ ಘೋಷಿಸಲಾಗಿದೆ. ಇದಕ್ಕೆ ಕನ್ನಡ ಸೇನೆ, ಕರವೇ, ಕರ್ನಾಟಕ ಜನಾಸೇನಾಪಾರ್ಟಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಹಿಂದೆ ಎಚ್.ಎನ್ ವ್ಯಾಲಿ ನೀರಿನಿಂದಅಂತರ್ಜಲ ಮಟ್ಟ ಕಲುಷಿತಗೊಳ್ಳುವ ಹಾಗೂ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಆತಂಕವ್ಯಕ್ತಪಡಿಸಿದ್ದರು. ಈಗ ಅಧಿಕಾರದಲ್ಲಿದ್ದರೂ ನನಗೆ ಪವರ್ ಇಲ್ಲ ಎನ್ನುತ್ತಿದ್ದಾರೆ. ಇನ್ನುಅವರಿಗೆ ಎಷ್ಟು ದಿನ ಅಧಿಕಾರದಲ್ಲಿರಿಸಬೇಕು? ಎಂದು ಎಂದು ಕರ್ನಾಟಕ ರೈತ ಜನಸೇನಾ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಕಿಡಿಕಾರಿದ್ದಾರೆ.
ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಒತ್ತಡ ಹೆಚ್ಚಾಗುತ್ತಿದೆ. ಆದರೂ ಪರಿಶುದ್ಧ ನೀರನ್ನು ಹರಿಸುವ ವಿಚಾರದಲ್ಲಿ ಶಾಸಕರುಕಾಳಜಿ ವಹಿಸುತ್ತಿಲ್ಲ.
ವಿಧಾನಸೌಧದಲ್ಲಿ ಕ್ಷೇತ್ರದ ಪರವಾಗಿ ಧ್ವನಿ ಎತ್ತುವುದನ್ನೇ ಮರೆತಿದ್ದಾರೆ.ನೀರಿನಸಮಸ್ಯೆ, ಉದ್ಯೋಗಾವಕಾಶ ಸೃಷ್ಟಿ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಮಾತನಾಡಿಲ್ಲಎಂದು ಕಿಡಿಕಾರಿದ್ದಾರೆ.