ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಸಹಕಾರ ಒಕ್ಕೂಟ ಚುನಾವಣಾ ಹವಾ ಜೋರು

ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಸಹಕಾರ ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಕೆ.ವಿ.ನಾಗರಾಜ್ ಉಮೇದುವಾರಿಕೆ ಸಲ್ಲಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಸಹಕಾರ ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಕೆ.ವಿ.ನಾಗರಾಜ್ ಉಮೇದುವಾರಿಕೆ ಸಲ್ಲಿಸಿದರು.
Published on
ಚಿಕ್ಕಬಳ್ಳಾಪುರ ಸಹಕಾರ ಹಾಲು ಒಕ್ಕೂಟದ 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಮುಂಬರುವ ಐದು ವರ್ಷಗಳ ಆಡಳಿತ ಸಮಿತಿಗೆ ಆಯ್ಕೆಗೆ ಜ.22 ರಂದು ಉಮೇದುವಾರಿಕೆ ಸಲ್ಲಿಕೆಗೆ ಕೊನೆ ದಿನವಾಗಿದ್ದು ಅಪಾರ ಬೆಂಬಲಿಗರೊಂದಿಗೆ ಪೈಪೋಟಿಯಲ್ಲಿ ಮೆರವಣಿಗೆ ಬಂದು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದರು. ನಿಯಮಾನುಸಾರ ಉಮೇದುವಾರಿಕೆಯ ಪರಿಶೀಲನೆ ಪ್ರಕ್ರಿಯೆ ನಡೆಯಲಿದ್ದು ಕಣದಲ್ಲಿರುವ ಅಭ್ಯರ್ಥಿಗಳು ವಾಪಸ್‌ ಪಡೆಯುವ ಮೂಲಕ ನಿವೃತ್ತಿ ಹೊಂದಬಹುದು.
ಉಮೇದುವಾರಿಕೆ ಸಲ್ಲಿಕೆಗೆ ಅವಕಾಶ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು ಆಯಾ ಕ್ಷೇತ್ರದಲ್ಲಿನ ಪ್ರತಿಸ್ಪರ್ಧಿಗಳು ಸರಾಗ ಗೆಲುವಿನ ಪ್ರಯತ್ನವಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಕ್ಷದ ನಾಯಕರ ಮೂಲಕ ಕಣದಿಂದ ನಿವೃತ್ತಿಯಾಗುವಂತೆ ಒತ್ತಡ ಹೇರುವಲ್ಲಿ ಮುಂದಾಗಿದ್ದಾರೆ. ಈ ವಿಚಾರದಲ್ಲಿ ಶನಿವಾರದವರೆಗೂ ಈ ಕಸರತ್ತು ಮುಂದುವರೆಯುವ ಸಾಧ್ಯತೆ ಇದೆ. ಇನ್ನು ಹಲವೆಡೆ ಅಭ್ಯರ್ಥಿಗಳ ಬೆಂಬಲಿಗರ ಸಲಹೆಯನ್ನು ಪಡೆದು ಕಣಕ್ಕಿಳಿದಿದ್ದು ಒಂದೇ ಬಣದಲ್ಲಿದ್ದರೂ ಪರಿಶೀಲನೆ ಸಂದರ್ಭದಲ್ಲಿ ಸ್ವಪಕ್ಷೀಯ ಅಭ್ಯರ್ಥಿಯ ಉಮೇದುವಾರಿಕೆ ತಿರಸ್ಕೃತಗೊಂಡಲ್ಲಿ ಇಲ್ಲವೇ ಚರ್ಚೆಯ ಅಂತಿಮ ನಿರ್ಧಾರದಂತೆ ಸ್ಪರ್ಧೆಗೆ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರ ಹಾಕಿದ್ದಾರೆ. ಕೆಲವರು ನಾಯಕರು ಇತರೆ ಒಳ್ಳೆಯ ಹುದ್ದೆಯ ಜವಾಬ್ದಾರಿ ವಹಿಸುವ ಭರವಸೆಯ ಬಳಿಕ ಕಣದಿಂದ ನಿವೃತ್ತಿ ಘೋಷಿಸುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net