ಮಕ್ಕಳ ಮಿದುಳಿನ ಬೆಳವಣಿಗೆಗೆ ಚೆಸ್​, ಕೇರಂ ಸಹಕಾರಿ

ಗುಡಿಬಂಡೆ ತಾಲೂಕಿನ ಜೆ.ಪಿ.ನಗರದ ಆದರ್ಶ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚೆಸ್​, ಕೇರಂ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು. ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ, ಜಿಪಂ ಉಪ ಕಾರ್ಯದರ್ಶಿ ಅತಿಕ್​ ಪಾಷಾ, ತಿರುಮಣಿ ಗ್ರಾಪಂ ಅಧ್ಯಕ್ಷೆ ಮಮತಾ, ಸೋಮೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಂಗಲಮ್ಮ ಇದ್ದರು.
ಗುಡಿಬಂಡೆ ತಾಲೂಕಿನ ಜೆ.ಪಿ.ನಗರದ ಆದರ್ಶ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚೆಸ್​, ಕೇರಂ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು. ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ, ಜಿಪಂ ಉಪ ಕಾರ್ಯದರ್ಶಿ ಅತಿಕ್​ ಪಾಷಾ, ತಿರುಮಣಿ ಗ್ರಾಪಂ ಅಧ್ಯಕ್ಷೆ ಮಮತಾ, ಸೋಮೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಂಗಲಮ್ಮ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾಕೂಟ, ಬಾಲ್ಯ ವಿವಾಹದ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಅಭಿಮತ
  • ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಆಟಗಳೂ ಅಗತ್ಯ.
  • 14 ವರ್ಷದೊಳಗಿನ ಮಕ್ಕಳ ಚೆಸ್​, ಕೇರಂ ಕ್ರೀಡಾಕೂಟ, ಬಾಲ್ಯ ವಿವಾಹದ ಜಾಗೃತಿ
ವಿಜಯವಾಣಿ ಸುದ್ದಿಜಾಲ ಗುಡಿಬಂಡೆ
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಓದು, ದೈಹಿಕ ಕ್ರೀಡೆಗಳಷ್ಟೇ ಸಾಲದು, ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಆಟಗಳೂ ಅಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚೆಸ್​, ಕೇರಂನಂತಹ ಏಕಾಗ್ರತೆ, ಬುದ್ಧಿಶಕ್ತಿ ಹೆಚ್ಚಿಸುವ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ಮಿದುಳಿನ ಶಕ್ತಿ ಚುರುಕುಗೊಳಿಸಿಕೊಳ್ಳಬೇಕು ಎಂದು ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ತಿಳಿಸಿದರು.
ತಾಲೂಕಿನ ಜೆ.ಪಿ.ನಗರದ ಆದರ್ಶ ವಿದ್ಯಾಲಯದಲ್ಲಿ ತಾಪಂ, ತಿರುಮಣಿ ಗ್ರಾಪಂ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 14 ವರ್ಷದೊಳಗಿನ ಮಕ್ಕಳ ಚೆಸ್​, ಕೇರಂ ಕ್ರೀಡಾಕೂಟ, ಬಾಲ್ಯ ವಿವಾಹದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಖೋಖೊ, ವಾಲಿಬಾಲ್​, ಕಬ್ಬಡಿ, ರನ್ನಿಂಗ್​ ಸೇರಿ ದೈಹಿಕ ಕ್ರೀಡೆಗಳಲ್ಲಿ ಮಾತ್ರ ಆಸಕ್ತಿರಾಗಿರುತ್ತಾರೆ. ಬುದ್ಧಿ ಶಕ್ತಿ ಹೆಚ್ಚಿಸುವ ಚೆಸ್​, ಕೇರಂ ನಂತಹ ಆಟಗಳಲ್ಲಿ ಭಾಗವಹಿಸುವುದಿಲ್ಲ. ಶಿಕ್ಷಕರು ಮಕ್ಕಳಿಗೆ ಈ ಕ್ರೀಡೆ ಕಲಿಸಬೇಕು. ಇತ್ತೀಚೆಗೆ ಈ ಭಾಗದಲ್ಲಿ ಹೆಚ್ಚು ಬಾಲ್ಯ ವಿವಾಹ ಪ್ರಕರಣ ನಡೆಯುತ್ತಿರುವುದು ವಿಷಾದನೀಯ. ಬಾಲ್ಯ ವಿವಾಹಗಳಿಂದ ಅನೇಕ ದುಷ್ಪರಿಣಾಮ ಉದ್ಬವಿಸಲಿದೆ. ಸಾಧನೆ ಮಾಡಬೇಕೆಂಬ ಕನಸು ಹೊತ್ತ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಪೊಲೀಸ್​ ಠಾಣೆಗಳಲ್ಲಿ ಹೆಚ್ಚು ೋಕ್ಸೋ ಪ್ರಕರಣಗಳೇ ದಾಖಲಾಗುತ್ತಿವೆ. ಇದೆಲ್ಲದಕ್ಕೂ ಶಿಕ್ಷಣ ಒಂದೇ ಮೂಲ ಮಂತ್ರ. ಶಿಕ್ಷಣದಿಂದ ಮಾತ್ರ ಎಲ್ಲವನ್ನೂ ಹೋಗಲಾಡಿಸಬಹುದು ಎಂದರು.
ತಾಪಂ ಇಒ ನಾಗಮಣಿ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಬುದ್ಧಿ ಶಕ್ತಿ ಹೆಚ್ಚಿಸಲು ಚೆಸ್​, ಕೇರಂನಂತಹ ಆಟಗಳು ಸಹಕಾರಿ. ಈ ಕ್ರೀಡೆಗಳ ಕುರಿತು ಹೆಚ್ಚು ಪ್ರಚಾರ ಮಾಡಬೇಕಿದೆ. ಸೋಲು&ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಜತೆಗೆ ಬಾಲ್ಯ ವಿವಾಹದ ಕುರಿತು ಜಾಗೃತರಾಗಬೇಕು. ಬಾಲ್ಯವಿವಾಹಕ್ಕೆ ಪಾಲಕರು ಮುಂದಾದರೇ ತಿಳಿಹೇಳಬೇಕು ಎಂದರು.
ಚೆಸ್​, ಕೇರಂ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ತಿರುಮಣಿ ಪಿಡಿಒ ಶ್ರೀನಿವಾಸಮೂರ್ತಿ, ಸೋಮೇನಹಳ್ಳಿ ಪಿಡಿಒ ನರಸಿಂಹಮೂರ್ತಿ, ದಪ್ಪರ್ತಿ ಪಿಡಿಒ ರಾಮಾಂಜಿ, ಬಿಇಒ ಕೃಷ್ಣಕುಮಾರಿ, ಆದರ್ಶ ಶಾಲೆ ಮುಖ್ಯಶಿಕ್ಷಕಿ ಕೃಷ್ಣಕುಮಾರಿ, ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಕಾರ್ಯದರ್ಶಿ ಬಿ.ಆರ್​.ಮಂಜುನಾಥ್​, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ಶ್ರೀರಾಮಪ್ಪ, ರಾಜಶೇಖರ್​, ಲಕ್ಷಿ$್ಮನರಸಿಂಹಗೌಡ, ರಫೀಕ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net