ಕಾರು ಪಲ್ಟಿಯಾಗಿ ದಾರುಣ ಸಾವು

ಕಾರು ಪಲ್ಟಿಯಾಗಿ ದಾರುಣ ಸಾವು
ಕಾರು ಪಲ್ಟಿಯಾಗಿ ದಾರುಣ ಸಾವು
Published on

ಪ್ರಮುಖ ಮುಖ್ಯಾಂಶಗಳು

  • ಚಾಕು ತೋರಿಸಿ ಮೊಬೈಲ್​ ದೋಚಿದ್ದ ಕದೀಮರು
  • ತಪ್ಪಿಸಿಕೊಳ್ಳುವ ಧಾವಂತದಲ್ಲಿ ಅವಡ
  • ಒಬ್ಬನ ಸೆರೆ
ಶಿಡ್ಲಟ್ಟ: ಚಾಕು ತೋರಿಸಿ ಕಾರ್ಮಿಕರ ಬಳಿ ಮೊಬೈಲ್​ ದೋಚಿದ ಕದೀಮರು ಪರಾರಿಯಾಗುವ ಧಾವಂತದಲ್ಲಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಒಬ್ಬ ಮೃತಪಟ್ಟಿದ್ದು, ಮತ್ತೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲತ@ ಆಂಧ್ರದ ಚಿತ್ತೂರಿನ ಸಿದ್ದು (25)ಮೃತ. ಲಾರಿ ಡ್ರೆವರ್​ ಆಗಿದ್ದ ಈತ 3 ವರ್ಷದಿಂದ ಪತ್ನಿ ಜತೆ ಕೈವಾರದಲ್ಲಿ ನೆಲೆಸಿದ್ದ. ಲಾರಿ ಡ್ರೆವರ್​ ಮೂಲತ@ ಕನ್ನಮಂಗಲ ನಿವಾಸಿ, ಕೈವಾರದಲ್ಲಿ ನೆಲೆಸಿದ್ದ ವೈಶಾಖ್​ ಬಂಧಿತ.
ಆಗಿದ್ದೇನು?: ತಾಲೂಕಿನ ಎಚ್​.ಕ್ರಾಸ್​ ಮಾರ್ಗದ ಹಾರಡಿ ಬಳಿ ಟೈಲ್ಸ್​ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕರಾಗಿದ್ದ ಉತ್ತರ ಪ್ರದೇಶದ ನಾಲ್ವರು ಸ್ವಂತ ಊರಿಗೆ ತೆರಳಲು ಬಸ್​ಗಾಗಿ ಎಚ್​.ಕ್ರಾಸ್​ಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ ನಾಲ್ವರ ಪೈಕಿ ಮೂವರ ಬಳಿ ಮೊಬೈಲ್​ಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು.
ರಾತ್ರಿ ಗಸ್ತು ಮುಗಿಸಿ ಠಾಣೆಗೆ ವಾಪಸ್​ ಆಗುತ್ತಿದ್ದ ಶಿಡ್ಲಟ್ಟ ಗ್ರಾಮಾಂತರ ಠಾಣೆಯ ಎಸ್​ಐ ಜೀಪನ್ನು ನಿಲ್ಲಿಸಿದರಿಂದ ಕೂಲಿ ಕಾರ್ಮಿಕರು ನಡೆದ ಟನೆ ವಿವರಿಸಿದ್ದಾರೆ. ಕಾರ್ಮಿಕರ ಮೊಬೈಲ್​ಗಳು ಕಳ್ಳರ ಬಳಿ ಇದ್ದ ಕಾರಣ ಮೊಬೈಲ್​ ಟವರ್​ ಲೊಕೇಷನ್​ನ್ನು ತಿಳಿದುಕೊಂಡು ಪೊಲೀಸರು ಕಾರನ್ನು ಹಿಂಬಾಲಿಸಿದ್ದಾರೆ. ಆದರೆ, ಅಷ್ಟರಲ್ಲಿ ಕಳ್ಳರ ಕಾರು ಶಿಡ್ಲಟ್ಟ&ಜಂಗಮಕೋಟೆ ಮಾರ್ಗದ ಬೋದಗೂರು ಮಳಮಾಚನಹಳ್ಳಿ ಮಧ್ಯೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಇಬ್ಬರೂ ಕುಡಿತದ ದಾಸರಾಗಿದ್ದು ಮೊಬೈಲ್​ ದರೋಡೆ ಸಮಯದಲ್ಲೂ ವಿಪರೀತ ಮಧ್ಯೆ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದರು.
ಶಿಡ್ಲಟ್ಟ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್ಪಿ ಕುಶಲ್​ ಚೌಕ್ಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net