

ಚಿಕ್ಕಬಳ್ಳಾಪುರ: ಎಚ್.ಎನ್.ವ್ಯಾಲಿಯೋಜನೆಯ ತ್ಯಾಜ್ಯಸಂಸ್ಕರಿಸಿದ ನೀರಿನಮೂರನೇ ಹಂತದಶುದ್ದೀಕರಣ, ಚಿಕ್ಕಬಳ್ಳಾಪುರಕ್ಕೆ ಕೃಷ್ಣನದಿ ನೀರಿನಪೂರೈಕೆ ಸೇರಿದಂತೆವಿವಿಧ ಬೇಡಿಕೆಈಡೇರಿಕೆಗೆ ಒತ್ತಾಯಿಸಿಲಕ್ಷ ಸಹಿಸಂಗ್ರಹ ಅಭಿಯಾನ ನಡೆಯುತ್ತಿದೆ.
ಜಲಜಾಗೃತಿ ವೇದಿಕೆ ಹಾಗೂ ಭಗತ್ಸಿಂಗ್ ಚಾರಿಟೇಬಲ್ಟ್ರಸ್ಟ್ ನೇತೃತ್ವದಲ್ಲಿಪ್ರತಿ ಗ್ರಾ.ಪಂಹಾಗೂ ವಾರ್ಡುವಾರುವಿಶೇಷ ಪುಸಕ್ತದಲ್ಲಿಜನರ ಸಹಿಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಈಭಾಗದಲ್ಲಿನ ನೀರಿನಹಾಹಾಕಾರ, ಗಂಭೀರಸಮಸ್ಯೆಗಳು, ನಿರೀಕ್ಷೆಯಪರಿಹಾರ ಕೆಲಸಗಳಬಗೆಗಿನ ಮಾಹಿತಿಯನ್ನೊಳಗೊಂಡಪತ್ರವನ್ನು ಕನ್ನಡಹಾಗೂ ಇಂಗ್ಲೀಷ್ನಲ್ಲಿ ಮುದ್ರಿಸಲಾಗಿದೆ.ಇದರಡಿ ಸಹಿಸಂಗ್ರಹದ ಬಳಿಕರಾಷ್ಟ್ರಪತಿಗಳಿಗೆ ಕಳುಹಿಸಿ,ನೀರಾವರಿ ಯೋಜನೆಗಳಜಾರಿ ಅಗತ್ಯತೆಯಬಗ್ಗೆ ಗಮನ ಸೆಳೆಯಲಾಗುತ್ತಿದೆ.
ಎಚ್.ಎನ್.ವ್ಯಾಲಿ ಯೋಜನೆಯ ನೀರನ್ನು ಮೂರನೇ ಹಂತದ ಶುದ್ದೀಕರಣಕ್ಕೆ ಮೊದಲ ಆದ್ಯತೆ ಸಿಗಬೇಕು. ಈಗಾಗಲೇ ಇಲ್ಲಿನ ಕಲುಷಿತ ನೀರಿನಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೆ, ಎಚ್ಚೆತ್ತುಕೊಳ್ಳುತ್ತಿಲ್ಲ. ಇದು ಬೇಸರದ ಸಂಗತಿ ಎಂದು ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷಸಂದೀಪ್ ಬಿ.ರೆಡ್ಡಿ ಬೇಸರಿಸಿದ್ದಾರೆ.