ಮಣ್ಣಿನಲ್ಲಿ ಹೂತ್ತಿದ್ದ ಮಗುವಿನ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

ಚೇಳೂರಿನ ಸ್ಮಶಾನದಲ್ಲಿ ಹೂತಿಟ್ಟಿದ್ದ ಮಗುವಿನ ಮೃತದೇಹ ಹೊರ ತೆಗೆಯುವ ದೃಶ್ಯ
ಚೇಳೂರಿನ ಸ್ಮಶಾನದಲ್ಲಿ ಹೂತಿಟ್ಟಿದ್ದ ಮಗುವಿನ ಮೃತದೇಹ ಹೊರ ತೆಗೆಯುವ ದೃಶ್ಯ
Published on

ಚಿಕ್ಕಬಳ್ಳಾಪುರ: ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಸ್ಮಶಾನದಲ್ಲಿ ಹೂತಿಟ್ಟ 40 ದಿನದ ಹಸುಗೂಸಿನ ಮೃತದೇಹವನ್ನು ಹೊರ ತೆಗೆದಿದ್ದು ತನಿಖೆಗಾಗಿ ಆಸ್ಪತ್ರೆಯಲ್ಲಿ‌ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಚೇಳೂರು
ತಹಸೀಲ್ದಾರ್ ಬಿ.ಕೆ.ಶ್ವೇತಾ ಸಮ್ಮುಖದಲ್ಲಿ ಹೂತಿಟ್ಟ ಮಗುವಿನ ಶವವನ್ನು ಹೊರ ತೆಗೆಯುವ ಪ್ರಕ್ರಿಯೆ ನಡೆಯಿತು. ಮಗುವನ್ನು ಕೊಲ್ಲಲಾಗಿದೆ ಎಂದು ಹೆತ್ತ ತಾಯಿ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು ಇದರ ತನಿಖೆ ಕೈಗೊಳ್ಳಲಾಗಿದೆ.

*ಪ್ರಕರಣದ ಹಿನ್ನೆಲೆ*
ಚೇಳೂರು ಪಟ್ಟಣದ ಆಸೀಫಾ ಎಂಬುವವರು ಚಿಂತಾಮಣಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ
ಎಸ್‌ಸಿ ಜನಾಂಗಕ್ಕೆ ಸೇರಿದ ರಾಜೇಶ್ ರನ್ನು ಪ್ರೀತಿಸಿ ಮಾದುವೆಯಾಗಿದ್ದರು. ಚಿಂತಾಮಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ನ.12 ರಂದು ಆಂಧ್ರಪ್ರದೇಶದ ಎನ್.ಟಿ.ರಾಮರಾವ್ ಆಸ್ಪತ್ರೆಯಲ್ಲಿ ಮಹಿಳೆಗೆ ಗಂಡು ಮಗುವಿಗೆ ಜನಿಸಿದೆ.
ಬಳಿಕ ಆಸೀಫಾ ಚೇಳೂರಿನಲ್ಲಿನ ಗುಂತುಮೋರಿ ಬಳಿ ಇರುವ ಎ-1 ಬಿರಿಯಾನಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ತನ್ಮ ಅಜ್ಜಿಯೊಂದಿಗೆ ವಾಸವಾಗಿದ್ದು ಇದರ ನಡುವೆ ಮನೆಯಲ್ಲಿದ್ದ ಮಗು ಅಸ್ವಸ್ಥಗೊಂಡಿದೆ. ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಕೊನೆಗೆ ಚೇಳೂರಿನಲ್ಲಿ ಮಗುವಿನ ಅಂತ್ಯಕ್ರಿಯೆ ನಡೆಸಲಾಗಿದೆ. ಇದೀಗ ಮಗುವನ್ನು ಸಾಯಿಸಿರುವ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.

*ಅಜ್ಜಿ ಮೇಲೆ ಅನುಮಾನ*
ಡಿ.23 ರಂದು ಆಸೀಫ್ ಪೊಲೀಸ್ ಠಾಣೆಗೆ ಬಂದು ನನ್ನ ಮಗುವನ್ನು ಉಸಿರುಗಟ್ಟಿಸಿ ಇಲ್ಲವೇ ವಿಷ ನೀಡಿ ಸಾಯಿಸಿರಬಹುದು. ನಮ್ಮ ಅಜ್ಜಿ ಮಹೂಬಿ ಮೇಲೆ ಅನುಮಾನ ಇದೆ ಎಂದು ದೂರು ಕೊಟ್ಟಿದ್ದಾಳೆ. ಇದರಿಂದ ಚೇಳೂರು ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟ‌ರ್ ಹರೀಶ್, ತಹಶೀಲ್ದಾರ್ ಶ್ವೇತಾ ಮತ್ತು ವೈದ್ಯಾಧಿಕಾರಿ ಸುಜೀತ್, ಭಾಸ್ಕರ್ ಸೋಕೋ ಟೀಮ್ ಸಮ್ಮುಖದಲ್ಲಿ ಹೂತ್ತಿಟ್ಟ ಮಗುವನ್ನು ಹೊರ ತೆಗೆದು ಸ್ಥಳದಲ್ಲಿಯೇ ಮಗುವಿನ ಶವ ಪರೀಕ್ಷೆ ನಡೆಸಲಾಗಿದೆ. ವರದಿಗಾಗಿ ಎದುರು ನೋಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net