

ಚಿಕ್ಕಬಳ್ಳಾಪುರ: ಪ್ರೀತಿಯಿಂದ ಸಾಕಿಸಲುಹಬೇಕಾದ ತಂದೆಯೇ ಲಿಂಗ ತಾರತಮ್ಯದ ಕೀಳು ಭಾವನೆಯಲ್ಲಿ ಹೆಣ್ಣು ಮಗುವನ್ನು ಸಂಪ್ ಗೆ ಹಾಕಿಹತ್ಯೆ ಮಾಡಿರುವ ಹೇಯ ಘಟನೆಯು ನಗರದ ನಕ್ಕಲಕುಂಟೆ(ಶಾಂತಿನಗರ)ದಲ್ಲಿ ನಡೆದಿದೆ.
ಇಲ್ಲಿನನಿವಾಸಿ ಇಮ್ರಾನ್ (೩೬) ಆರೋಪಿ. ಗಂಡು ಮಗುವಿಗಾಗಿ ಹಾತೊರೆಯುತ್ತಿದ್ದ ಈ ನಿರ್ದಯಿ ತಂದೆಯುತಡರಾತ್ರಿ ಮುಗ್ಧ ಹಸುಗೂಸನ್ನು ಮನೆಯ ಆವರಣದಲ್ಲಿದ್ದ ಸಂಪಿನ ನೀರಿಗೆ ಹಾಕಿ ಸಾಯಿಸಿದ್ದು ಬಳಿಕಏನು ಅರಿಯದವನಂತೆ ನಟಿಸಿದ್ದಾನೆ. ಆದರೆ, ಪೊಲೀಸ್ ತನಿಖೆಯಲ್ಲಿ ಈತನ ಹೇಯ ದುಷ್ಕೃತ್ಯವು ಬಯಲಿಗೆಬಂದಿದೆ.
ಆರೋಪಿಇಮ್ರಾನ್ ಹಾಗೂ ಮುಸ್ಕಾನ್ ದಂಪತಿಗೆ ಕಳೆದ ೧೩ ದಿನಗಳ ಹಿಂದೆ ಹೆಣ್ಣು ಮಗು ಜನಿಸಿದೆ. ಆದರೆ,ರಾತ್ರಿ ತಾಯಿ ಪಕ್ಕದಲ್ಲಿದ್ದ ಮಲಗಿದ್ದ ಮಗು ಗುರುವಾರ ಬೆಳಿಗ್ಗೆ ಕಾಣಿಸಿಲ್ಲ. ಇದರಿಂದಕುಟುಂಬಸ್ಥರು ಎಲ್ಲ ಕಡೆ ಹುಡುಕಿದ್ದಾರೆ. ಕೊನೆಗೆ ಅನುಮಾನಗೊಂಡು ಪರಿಶೀಲಿಸಿದಾಗ ಮನೆಯಆವರಣದಲ್ಲಿನ ಸಂಪಿನ ನೀರಿನಲ್ಲಿ ಮೃತದೇಹ ಪತ್ತೆಯಾಗಿದೆ. ಕೂಡಲೇ ಮಗುವಿನ ಹೆತ್ತ ತಾಯಿ ನಗರಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಇಮ್ರಾನ್‌ಗೆ ಒಂದು ಹೆಣ್ಣು ಮಗು ಇದೆ. ಹೆಂಡತಿಯ ಎರಡನೇ ಹೆರಿಗೆಯಲ್ಲಾದರೂ ಮಗ ಜನಿಸಲಿ ಎಂದುಹಾತೊರೆಯುತ್ತಿದ್ದ. ಆದರೆ, ಇದು ಹುಸಿಯಾಗುತ್ತಿದ್ದಂತೆ ಬೇಸರಗೊಂಡಿದ್ದಾನೆ. ಬುಧವಾರ ರಾತ್ರಿಮಗುವನ್ನು ಎತ್ತಿಕೊಂಡು ಹೋಗಿ ಸಂಪಿನೊಳಗೆ ಹಾಕಿದ್ದಾನೆ. ಕುಟುಂಬಸ್ಥರು ಮಗುನಾಪತ್ತೆಯಾಗಿರುವುದರ ಬಗ್ಗೆ ಪ್ರಶ್ನಿಸಿದಾಗ ಏನು ಗೊತ್ತಿಲ್ಲದವನಂತೆ ನಟಿಸಿದ್ದಾನೆ.