ಕುರಿ ಮೇಯಿಸುತ್ತಿದ್ದಾಗ ಚಿನ್ನಾಭರಣ ಕಸಿದುಕೊಂಡು ಪರಾರಿಯಾದ ಬೈಕ್ ಸವಾರ

ಬಂಗಾರದ ಕಳವು
ಬಂಗಾರದ ಕಳವು
Published on
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕುರುಬೂರು ಕೆರೆಯ ಬಳಿ ಕುರಿಗಳನ್ನು ಮೇಯಿಸಿಕೊಂಡು ಮರದ ಕೆಳಗೆ ಕುಳಿತ್ತಿದ್ದ ಮಹಿಳೆಗೆ ಚಾಕು ತೋರಿಸಿ ಕಿವಿಯಲ್ಲಿದ್ದ ಚಿನ್ನದ ಓಲೆ ಮತ್ತು ಕತ್ತಿನಲ್ಲಿದ್ದ ತಾಳಿ ಬೊಟ್ಟು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಗ್ರಾಮದ ಮಹಿಳೆ ಪದ್ಮಾ(48) ಚಿನ್ನಾಭರಣ ಕಳೆದುಕೊಂಡವರು. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕುರಿಗಳನ್ನು ಮೇಯಿಸಲು ಗಂಡ ಸದಾಶಿವರೊಂದಿಗೆ ಹೋಗಿದ್ದು ಇದರ ನಡುವೆ ಮೈಯಲ್ಲಿ ಹುಷಾರಿಲ್ಲದ ಕಾರಣ ಪತಿ ಮನೆಗೆ ವಾಪಸ್ಸಾಗಿದ್ದಾರೆ. ಇದರ ನಡುವೆ
ಕುರಿಗಳನ್ನು ಮೇಯಿಸಿಕೊಂಡು ಬಿಸಿಲಿಗೆ ಮರದ ಕೆಳೆಗೆ ಕುಳಿತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ವ್ಯಕ್ತಿ ಚಾಕುವನ್ನು ತೋರಿಸಿ ಬೆದರಿಸಿದ್ದು ಬಂಗಾರದ ಒಡವೆಗಳನ್ನು ಕೊಡು ಇಲ್ಲವಾದರೆ ಕುರಿಗಳನ್ನು ಕೊಡು ಎಂದು ಪೀಡಿಸಿದ. ಆಗ ನಾನು ಕೊಡುವುದಿಲ್ಲ ಎಂದಾಗ ನನ್ನ ಮೇಲೆ ಹಲ್ಲೆ ಮಾಡಿ ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕತ್ತಿನಲ್ಲಿದ್ದ ತಾಳಿ ಬೊಟ್ಟುಗಳನ್ನು ಕಿತ್ತುಕೊಂಡು ಹೋಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ‌.
ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net