ಅಪರಚಿತ ವಾಹನಕ್ಕೆ ಬೈಕ್​ ಡಿಕ್ಕಿ ಸವಾರ ಸಾವು

ಗಿರೀಶ್​
ಗಿರೀಶ್​
Published on

ಪ್ರಮುಖ ಮುಖ್ಯಾಂಶಗಳು

  • ಹೆದ್ದಾರಿಯ ಚಿಂತಾಮಣಿ-&ಶಿಡ್ಲಘಟ್ಟ ರಸ್ತೆಯ ವೈ ಹುಣಸೇನಹಳ್ಳಿ ಬಳಿ ಅಪಘಾತ
  • ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಮಾಡಿಕೆರೆಯ ಗಿರೀಶ್​ (24)ಮೃತ.
  • ತೀವ್ರ ಗಾಯಗೊಂಡಿ ಬೈಕ್​ ಸವಾರ
ಚಿಂತಾಮಣಿ: ಹೆದ್ದಾರಿಯ ಚಿಂತಾಮಣಿ-&ಶಿಡ್ಲಘಟ್ಟ ರಸ್ತೆಯ ವೈ ಹುಣಸೇನಹಳ್ಳಿ ಬಳಿಯ ಇಂಡಿಯನ್​ ಪೆಟ್ರೋಲ್​ ಬಂಕ್​ ಬಳಿ ಮುಂದೆ ಹೋಗುತ್ತಿದ್ದ ಅಪರಚಿತ ವಾಹನಕ್ಕೆ ಬೈಕ್​ ಡಿಕ್ಕಿಯಾಗಿ ತೀವ್ರ ಗಾಯಗೊಂಡಿ ಬೈಕ್​ ಸವಾರ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆ. ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಮಾಡಿಕೆರೆಯ ಗಿರೀಶ್​ (24)ಮೃತ. ತಂದೆ ನಾರಾಯಣಸ್ವಾಮಿ ದೂರಿನ ಮೇಲೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ರಾತ್ರಿ ಮುಂದೆ ಹೋಗುತ್ತಿದ್ದ ವಾಹನ ಯಾವುದೇ ಮುನ್ಸೂಚನೆ ನೀಡದೆ ತಕ್ಷಣ ಬ್ರೇಕ್​ ಹಾಕಿದ್ದರಿಂದ ಗಿರೀಶ್​ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವಾಗ ದಾರಿಯ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ.ಬುಧವಾರ ಮೃತನ ಅಂತ್ಯ ಸಂಸ್ಕಾರ ನೆರವೇರಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net