ಬ್ಯಾಂಕ್​ ಶಾಖೆ ವ್ಯವಸ್ಥಾಪಕ ಆತ್ಮಹತ್ಯೆ

ಮಧುತೇಜ್​
ಮಧುತೇಜ್​
Published on

ಗೌರಿಬಿದನೂರು: ನಗರದ

ಗೌರಿಬಿದನೂರು ತಾಲೂಕಿನ ಡಿ.ಪಾಳ್ಯದ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ದೊಡ್ಡಬಳ್ಳಾಪುರ ಮೂಲದ ಮಧು ತೇಜ್​(35) ಮೃತ. ಆ.10ರಂದು ರಾತ್ರಿ ಲಾಡ್ಜ್​ಗೆ ಬಂದಿದ್ದ ಮಧು ತೇಜ್​, ತಾವು ಒಬ್ಬರೇ ಉಳಿದು ಬೆಳಗ್ಗೆ ಚೆಕ್​ಔಟ್​ ಮಾಡುವುದಾಗಿ ತಿಳಿಸಿ ರೂಮ್​ ಪಡೆದಿದ್ದರು. ಆದರೆ ಬೆಳಗ್ಗೆ ರೂಮ್​ನಿಂದ ಹೊರಬರದ ಹಿನ್ನೆಲೆಯಲ್ಲಿ ಸಿಬ್ಬಂದಿ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬಂದಿರಲಿಲ್ಲ.

ರಾತ್ರಿಯಾದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಿಬ್ಬಂದಿ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಗೌರಿಬಿದನೂರು ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಧು ತೇಜ್​ಗೆ ಪತ್ನಿ ಹಾಗೂ 4 ಹಾಗೂ 8 ವರ್ಷದ ಇಬ್ಬರು ಪುತ್ರರು ಇದ್ದಾರೆ. ಮನೆಯಲ್ಲಿ ಯಾವುದೇ ಗಲಾಟೆ ಇರಲಿಲ್ಲ ಎಂದು ಮೃತರ ತಂದೆ ತಿಳಿಸಿದ್ದಾರೆ. ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net