

ಅಭಿವೃದ್ಧಿ ಕಾರ್ಯಗಳೇ ಶ್ರೀರೆ
ಟೀಕೆಗಳಿಗೆ ಜನರೇ ಉತ್ತರ ನೀಡಲಿದ್ದಾರೆ
ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿಕೆ
ಗೌರಿಬಿದನೂರು:ಅಭಿವೃದ್ಧಿಯೇ ನಮ್ಮ ರಾಜಕೀಯದ ಮೂಲಮಂತ್ರ. ಮೂರುವರೆ ವರ್ಷಗಳಿಂದ ೇತ್ರದಲ್ಲಿ ಜಾತಿ, ಧರ್ಮ ಹಾಗೂ ಪಕ್ಷದ ಭೇದವಿಲ್ಲದೆ ಜನಪರ ಆಡಳಿತ ನೀಡುತ್ತಾ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.
ನಗರದ ಶಾಸಕರ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸೇರ್ಪಡೆ ಕಾರ್ಯಕ್ರಮದಲ್ಲಿ ಜಿ.ಕೋತ್ತೂರು ಗ್ರಾಪಂ ವ್ಯಾಪ್ತಿಯ ಜಿ.ಕೋತ್ತೂರು, ಜಿಂಕವರ್ಲಹಳ್ಳಿ, ಬೆಲ್ಲವಲಹಳ್ಳಿ ಹಾಗೂ ಚೋಳಶೆಟ್ಟಳ್ಳಿ ಗ್ರಾಮಗಳ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರನ್ನು ಕೆಎಚ್ಪಿ ಬಣಕ್ಕೆ ಬರಮಾಡಿಕೊಂಡು ಶಾಸಕರು ಮಾತನಾಡಿದರು.
ಅಧಿಕಾರ ಎನ್ನುವುದು ಜನರ ಸೇವೆ ಮಾಡಲು ಸಿಕ್ಕಿರುವ ಅವಕಾಶವೇ ಹೊರತು, ವೈಯಕ್ತಿಕ ಪ್ರತಿಷ್ಠೆ ಬೆಳೆಸಿಕೊಳ್ಳಲು ಇರುವ ವೇದಿಕೆಯಲ್ಲ. ೇತ್ರದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಕೆಲಸವೇ ನಮಗೆ ಪ್ರಚಾರ, ಅಭಿವೃದ್ಧಿಯೇ ನಮ್ಮ ಗೆಲುವಿನ ಶ್ರೀರೆ ಎಂದು ಹೇಳಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವರು ಗ್ರಾಮಗಳಿಗೆ ಭೇಟಿ ನೀಡಿ ಬಣ್ಣಬಣ್ಣದ ಭರವಸೆಗಳನ್ನು ನೀಡುತ್ತಿದ್ದಾರೆ. ಜನಕ್ಕೆ ಕುಡಿಯುವ ನೀರು, ಉತ್ತಮ ರಸ್ತೆ, ಚರಂಡಿ, ಶಿಕ್ಷಣ ಹಾಗೂ ಸೌಕರ್ಯಗಳು ಬೇಕಾಗಿವೆ. ಜನರ ನೈಜ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಲ್ಪಿಸುವುದೇ ನಮ್ಮ ಆದ್ಯತೆ. ನಾವು ಚುನಾವಣೆಗಾಗಿ ಅಭಿವೃದ್ಧಿ ಮಾಡುತ್ತಿಲ್ಲ, ಅಭಿವೃದ್ಧಿಯ ಮೂಲಕ ಜನರ ವಿಶ್ವಾಸ ಗಳಿಸಿ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ಕೆಲವರಿಗೆ ನಡೆಯುತ್ತಿರುವ ಅಭಿವೃದ್ಧಿಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಾವು ಯಾವುದೇ ಜನಪರ ಕೆಲಸ ಮಾಡದೆ, ಇತರರು ಮಾಡುತ್ತಿರುವ ಕೆಲಸಗಳ ಬಗ್ಗೆ ಟೀಕೆ ಮಾಡುವುದು ಮತ್ತು ಅಪಪ್ರಚಾರ ನಡೆಸುವುದನ್ನೇ ರಾಜಕೀಯ ಎಂದು ಭಾವಿಸಿದ್ದಾರೆ. ಆದರೆ ಜನರು ಯಾರು ಜನರ ನಡುವೆ ಇದ್ದು ಕೆಲಸ ಮಾಡುತ್ತಿದ್ದಾರೆ, ಯಾರು ಚುನಾವಣೆ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸೂಕ್ಷ$್ಮವಾಗಿ ಗಮನಿಸುತ್ತಿದ್ದಾರೆ. ಟೀಕೆಗಳಿಗೆ ನಾನು ಉತ್ತರಿಸುವುದಕ್ಕಿಂತ ಜನರೇ ಮತದಾನದ ಮೂಲಕ ಉತ್ತರ ನೀಡಲಿದ್ದಾರೆ. ಮುಂಬರುವ ಪಂಚಾಯಿತಿ ಚುನಾವಣೆಗಳಲ್ಲಿ ಜನರ ತೀರ್ಪು ಏನೆಂಬುದು ಸ್ಪಷ್ಟವಾಗಲಿದೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಮುಖಂಡ ನಾಗೇಂದ್ರ, ೇತ್ರದಲ್ಲಿ ಶಾಸಕರು ನಡೆಸುತ್ತಿರುವ ಜನಸಂಪರ್ಕ ಕಾರ್ಯಕ್ರಮಗಳು, ಅಭಿವೃದ್ಧಿ ಕಾರ್ಯಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕಾರ್ಯವೈಖರಿಯನ್ನು ಮೆಚ್ಚಿ ಬೆಂಬಲಿಗರೊಂದಿಗೆ ಮುಖಂಡರು, ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಕೆಎಚ್ಪಿ ಬಣಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದರು.
ರಾಜೇಶ್, ಮುಖಂಡರಾದ ಆರ್.ಆರ್.ರೆಡ್ಡಿ, ಕೃಷ್ಣಪ್ಪ, ಸೂರ್ಯನಾರಾಯಣ ರೆಡ್ಡಿ, ಮಂಜುನಾಥ್, ಪವನ್, ಉಪೇಂದ್ರ, ರಾಜು, ಸುರೇಶ್, ಗಂಗಪ್ಪ, ವೆಂಕಟೇಶಪ್ಪ, ರಾಜೇಶ್ ಇದ್ದರು.