ನಕಲಿ ಕೀಟನಾಶಕಗಳನ್ನು ತಯಾರಿಸಿ ಮಾರುತ್ತಿದ್ದ ನಕಲಿ ಬೆಳೆತಜ್ಞನ ಬಂಧನ

ತಯಾರಿಕೆಯ ನಕಲಿ ಉತ್ಪನ್ನ
ತಯಾರಿಕೆಯ ನಕಲಿ ಉತ್ಪನ್ನ
Published on

ಚಿಕ್ಕಬಳ್ಳಾಪುರ: ಎಪಿಎಂಸಿಯಾರ್ಡಿನ ಮುಂಭಾಗದ ಮನೆಯೊಂದರಲ್ಲಿ ನಕಲಿ ಕೀಟನಾಶಕಗಳನ್ನು ತಯಾರುತ್ತಿದ್ದ ವ್ಯಕ್ತಿಯನ್ನು ಕೃಷಿಇಲಾಖೆ ಜಾಗೃತದಳ ಅಧಿಕಾರಿಗಳುಬಂಧಿಸಿದ್ದಾರೆ.

ಇಲ್ಲಿನ ನಿವಾಸಿ ಸೋಮಸುಂದರ್ (೪೩)ಆರೋಪಿ. ʻಬೆಳೆತಜ್ಞʼ ಎಂಬುದಾಗಿಪರಿಚಯಿಸಿಕೊಂಡಿದ್ದ ಈತ ನಕಲಿ ಕೀಟನಾಶಕಗಳನ್ನು ತಯಾರಿಸುತ್ತಿದ್ದನು. ಹಾಗೆಯೇ ಕಡಿಮೆ ದರಕ್ಕೆಮಾರುತ್ತಿದ್ದನು. ಈತನಿಂದ ಪ್ರತಿಷ್ಠಿತ ವಿವಿಧ ಸಂಸ್ಥೆಗಳ ಹೆಸರಿನ 200ಲೀಟರ್ಗೂಹೆಚ್ಚು ವಿವಿಧಕೃಷಿ ರಾಸಾಯನಿಕಗಳು,ಪ್ಯಾಕಿಂಗ್ ಸಾಮಗ್ರಿಹಾಗೂ 11 ರಿಂದ12 ಕಂಪನಿಗಳ ಹೆಸರಿನನಕಲಿ ಲೇಬಲ್ಗಳನ್ನವಶಪಡಿಸಿಕೊಂಡಿದ್ದಾರೆ.

ದಾಳಿಂಬೆ, ದ್ರಾಕ್ಷಿ,ಮಾವು ಸೇರಿದಂತೆತೋಟಗಾರಿಕಾ ಬೆಳೆಗಳಿಗೆಸಿಂಪಡಿಸುವ ನಿಟ್ಟಿನಲ್ಲಿ ರಾಸಾಯಾನಿಗಳನ್ನು ತಯಾರಿಸುತ್ತಿದ್ದ. ಅದು ಪ್ರತಿಷ್ಠಿತ ಕಂಪನಿಗಳಬಗೆಬಗೆಯ ಉತ್ಪನ್ನಗಳ ಮಿಶ್ರಣ, ಬೇರೆ ಲೇಬಲ್ಗಳನ್ನುಮುದ್ರಿಸಿ, ಬಾಟಲಿಗಳಿಗೆಅಂಟಿಸಿ, ಪ್ಯಾಕಿಂಗ್ಮಾಡುವುದನ್ನು ದೊಡ್ಡ ಸಂಶೋಧನೆಯನ್ನಾಗಿ ಬಿಂಬಿಸಿಕೊಂಡಿದ್ದ. ಇದರಬಗ್ಗೆ ಮಾಹಿತಿ ಪಡೆದ ಕೃಷಿ ಇಲಾಖೆ ಜಾಗೃತ ದಳ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಮಾಲನ್ನುವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net