ಅನುಭವ ಮಂಟಪ ಯುವ ಧ್ವನಿ ವೇದಿಕೆಯ ಸ್ಪೂರ್ತಿದಾಯಕ ಲಾಂಛನ ಬಿಡುಗಡೆ

ಚಿಕ್ಕಬಳ್ಳಾಪುರ ತಾಲೂಕಿನ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೈಗೊಂಡಿದ್ದ ಅನುಭವ ಮಂಟಪ ಯುವ ಧ್ವನಿ ವೇದಿಕೆ ಲಾಂಭನ ಬಿಡುಗಡೆ ಕಾರ್ಯಕ್ರಮ.
ಚಿಕ್ಕಬಳ್ಳಾಪುರ ತಾಲೂಕಿನ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೈಗೊಂಡಿದ್ದ ಅನುಭವ ಮಂಟಪ ಯುವ ಧ್ವನಿ ವೇದಿಕೆ ಲಾಂಭನ ಬಿಡುಗಡೆ ಕಾರ್ಯಕ್ರಮ.
Published on
ಚಿಕ್ಕಬಳ್ಳಾಪುರ: ಇಲ್ಲಿನ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸಂಸ್ಥೆಯಲ್ಲಿ ಅನುಭವ ಮಂಟಪ - ಯುವಧ್ವನಿ ವೇದಿಕೆಯ ಲಾಂಛನವನ್ನು ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ ಅನಾವರಣಗೊಳಿಸಿದರು.
12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸ್ಥಾಪಿತವಾದ ಅನುಭವ ಮಂಟಪ ಸಮಾನತೆ, ಸ್ವಾತಂತ್ರ್ಯ ಮತ್ತು ಚಿಂತನೆಯ ಮಹಾಕ್ರಾಂತಿಯ ಕೇಂದ್ರ. ಇದು ಧಾರ್ಮಿಕ ಕೇಂದ್ರ, ರಾಜಕೀಯ ಸಂಸ್ಥೆಯೂ ಆಗಿರಲಿಲ್ಲ. ಜನತಾಂತ್ರಿಕ ಚಿಂತನೆಯ ಮೊದಲ ವೇದಿಕೆ. ಇದೇ ಪರಿಕಲ್ಪನೆಯಲ್ಲೇ ಸಿದ್ಧವಾಗಿರುವ "ಅನುಭವ ಮಂಟಪ ಯುವ ಧ್ವನಿಯು ವಿದ್ಯಾರ್ಥಿಗಳಲ್ಲಿ ವೈಚಾರಿಕ ಹಾಗು ವೈಜ್ಞಾನಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಲಿ ಎಂದು ಸಲಹೆ ನೀಡಿದರು.
ಯುವ ಧ್ವನಿಯು ಭವಿಷ್ಯದ ದೀಪ, ಅಂಧಕಾರದಲ್ಲಿನ ಬೆಳಕು, ಭಯದಲ್ಲಿನ ಧೈರ್ಯ, ಅನ್ಯಾಯದ ವಿರುದ್ಧದ ಶಕ್ತಿಯಾಗಬೇಕು. ವಿದ್ಯಾರ್ಥಿಗಳನ್ನು ನಾಯಕರನ್ನಾಗಿ ಬೆಳೆಸುವ ಒಂದು ಒಳ್ಳೆಯ ವೇದಿಕೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಾಗಾರ್ಜುನ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಗೋಪಾಲಕೃಷ್ಣ, ಸಂಸ್ಥೆಗಳ ನಿರ್ದೇಶಕ ಪ್ರೊ.ಮನೋಹರ್ ನಾರಜ್ಜಿ, ಪ್ರಾಂಶುಪಾಲೆ ಆನಂದಮ್ಮ, ಕಾಮರ್ಸ್‌ ವಿಭಾಗದ ಮುಖ್ಯಸ್ಥ ಕಿರಣ್‌ ಕುಮಾರ್‌, ವಿಜ್ಞಾನ ವಿಭಾಗದ ಮುಖ್ಯಸ್ಥೆ ಅರುಣ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net