ಅಖಂಡ- 2 ಚಿತ್ರ ಪ್ರದರ್ಶನ ರದ್ದು

ಚಿತ್ರಮಂದಿರದಿಂದ ವಾಪಸಾದ ಅಭಿಮಾನಿಗಳು
ಚಿತ್ರಮಂದಿರದಿಂದ ವಾಪಸಾದ ಅಭಿಮಾನಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಬಾಲಕೃಷ್ಣ ಅಭಿಮಾನಿಗಳಿಗೆ ನಿರಾಸೆ
  • ಚಿತ್ರಮಂದಿರದಿಂದ ವಾಪಸಾದ ಅಭಿಮಾನಿಗಳು
  • ನ್ಯಾಯಾಲಯದ ಮೆಟ್ಟಿಲೇರಿದ್ದ ಫೈನಾನ್ಸಿಯರ್​ಗಳು
ಚಿಂತಾಮಣಿ: ತೆಲುಗು ಚಿತ್ರನಟ ನಂದಮೂರಿ ಬಾಲಕೃಷ್ಣ ಅವರ ಅಖಂಡ -2 ಚಿತ್ರ ಪ್ರದರ್ಶನ ದಿಢೀರ್​ ರದ್ದಾಗಿದ್ದು, ಶುಕ್ರವಾರ ಚಿತ್ರ ಬಿಡುಗಡೆಗೆ ಕಾತರದಿಂದ ಕಾದಿದ್ದ ಬಾಲಕೃಷ್ಣ ಅಭಿಮಾನಿಗಳಿಗೆ ನಿರಾಸೆಯಾಯಿತು. ಅಭಿಮಾನಿಗಳು ನಗರದ ಅಂಜನಿ ಚಿತ್ರಮಂದಿರದಿಂದ ವಾಪಸಾಗುತ್ತಿದ್ದ ದೃಶ್ಯ ಕಂಡುಬಂತು. ಸಿನಿಮಾ ನಿಮಾರ್ಪಕರು ಕಾನೂನು ಸಿಕ್ಕುಗಳಲ್ಲಿ ಸಿಲುಕಿಕೊಂಡಿರುವುದರಿಂದ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಸಿನಿಮಾ 14 ರೀಲ್ಸ್​ ಪ್ಲಸ್​ ಎಂಟರ್​ಟೈನ್​ಮೆಂಟ್​ ಸಂಸ್ಥೆಯಡಿ ನಿರ್ಮಾಣವಾಗಿದ್ದು, ಕೆಲ ಹಿಂದಿನ ಸಿನಿಮಾಗಳಿಂದಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ.ಹಳೇ ಬಾಕಿಯ ಕಾರಣ ಫೈನಾನ್ಸಿಯರ್​ಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಚಿತ್ರ ಬಿಡುಗಡೆಗೆ ತಡೆ ಹಿಡಿಯಲಾಗಿದೆ. ಇನ್ನು ತಮಿಳುನಾಡಿನಲ್ಲೂ ಅಖಂಡ 2 ಪ್ರತ್ಯೇಕ ಕಾನೂನು ಸಮಸ್ಯೆಗೆ ಗುರಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net